ರಾಷ್ಟ್ರೀಯ

ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ದೂರದ ಕುಗ್ರಾಮದ ಆಸ್ಪತ್ರೆಗೆ ರಕ್ತ ರವಾನೆ !

Pinterest LinkedIn Tumblr

ಡೆಹರಾಡೂನ್: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ದೂರದ ಕುಗ್ರಾಮವೊಂದರ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರಕ್ತದ ಮಾದರಿಯನ್ನು ರವಾನಿಸಲಾಗಿದೆ.

ಉತ್ತರಾಖಂಡ್‍ನ ನಂದಗೋನ್‍ ಜಿಲ್ಲೆಯಿಂದ 30ಕಿಮೀ. ದೂರದಲ್ಲಿರುವ ಥೇಹ್ರೀ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ರಕ್ತವನ್ನು ರವಾನೆ ಮಾಡಲಾಗಿದೆ. ಇಂತಹಾ ಒಂದು ಪ್ರಯತ್ನ ಭಾರತದಲ್ಲೇ ಇದು ಮೊದಲನೆಯದಾಗಿದ್ದು ಮೊದಲ ಯತ್ನದಲ್ಲೇ ಯಶಸ್ಸು ಕಂಡಿದೆ, ದೇಶದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಇದೊಂದು ಮಹತ್ವದ ದಾಖಲೆಯಾಗಿದೆ.

ನಂದಗೋನ್‍ ನಿಂದ ಥೇಹ್ರಿ ನಡುವಿನ 30 ಕಿ.ಮೀ ದೂರವನ್ನು ಡ್ರೋನ್ ಕೇವಲ 18 ನಿಮಿಷದಲ್ಲಿ ಕ್ರಮಿಸಿದೆ. ಹೀಗೆ ಅತ್ಯಂತ ಕ್ಷಿಪ್ರವಾಗಿ ರಕ್ತ ಸರಬರಾಜ್ದ ಕಾರಣ ಆಸ್ಪತ್ರೆಯಲ್ಲಿನ ರೋಗಿಯ ಪ್ರಾಣ ಉಳಿದಿದೆ.

ಇದೇ ವೇಳೆ ಒಂದೊಮ್ಮೆ ರಸ್ತೆ ಮೂಲಕ ರಕ್ತದ ಮಾದರಿ ಸಾಗಿಸಬೇಕಾದರೆ ಈ ಮಾರ್ಗದಲ್ಲಿ ಕನಿಷ್ಟ ಒಂದರಿಂದ ಒಂದೂವರೆ ತಾಸು ಹಿಡಿಯುತ್ತಿತ್ತು.

ಕಾನ್ಪುರದಲ್ಲಿರುವ ಐಐಟಿ ತಜ್ಞರನ್ನು ಸಂಪರ್ಕಿಸಿದ ವೈದ್ಯರು ರಕ್ತದ ಸಾಗಾಟಕ್ಕೆ ವ್ಯವಸ್ಥೆ ಕಲ್ಪಿಸಲು ಕೇಳಿದ್ದಾರೆ. ಆಗ ಅವರು ಐಐಟಿಯ ಹಳೆಯ ವಿದ್ಯಾರ್ಥಿ ನಿಖಿಲ್ ಉಪಾದ್ಯಾಯ ಮಾಲೀಕತ್ವ ಸಿಡಿ ಸ್ಪೇಸ್ ರೋಬೋಟಿಕ್ಸ್ ಲಿಮಿಟೆಡ್ ಕಂಪನಿ ಕುರಿತು ಹೇಳಿದ್ದಾರೆ ಅದರಂತೆ ನಿಖಿಲ್ ಡ್ರೋನ್ ಮೂಲಕವೇ ರಕ್ತ ರವಾನೆ ಮಾಡಲು ಎಲ್ಲಾ ಅನುಕೂಲಗಳನ್ನು ಕಲ್ಪಿಸಿದ್ದಾರೆ.

Comments are closed.