ಕರ್ನಾಟಕ

ಸಿಎಂ ಆದವರು ಇಷ್ಟೊಂದು ಮಾತನಾಡಬಾರದು: ಪೇಜಾವರ ಶ್ರೀ

Pinterest LinkedIn Tumblr


ಬಳ್ಳಾರಿ : ಮುಖ್ಯಮಂತ್ರಿ ಆದವರು ಇಷ್ಟೊಂದು ಮಾತನಾಡಬಾರದು, ತಾಳ್ಮೆ ಇದ್ದರೆ ಒಳ್ಳೆಯದು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜಾತ್ಯತೀತ‌ ಸಿದ್ಧಾಂತ, ಎಡಪಂಥೀಯ- ಬಲಪಂಥೀಯ ವಿಭಜನೆಗಳನ್ನು ಬಿಟ್ಟು ಮೂರೂ ಪಕ್ಷಗಳು ಒಗ್ಗಟ್ಟಾದರೆ ಮಾತ್ರ ಗೊಂದಲಗಳು ಬಗೆಬಹರಿಯುತ್ತವೆ. ಜನರಿಗೆ ಉತ್ತಮ ಆಡಳಿತವೂ ದೊರಕುತ್ತದೆ ಎಂದರು. ಬಿಜೆಪಿಯೂ ಸಂವಿಧಾನವನ್ನು ಒಪ್ಪಿಕೊಂಡಿದೆ. ಅದೂ ಜಾತ್ಯತೀತ ಪಕ್ಷವೇ. ಹೀಗಾಗಿ ಮೂರು ಪಕ್ಷಗಳು ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಎಂದು ಪ್ರತಿಪಾದಿಸಿದರು.

ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ನಾನು ಬಳ್ಳಾರಿಗೆ ಬಂದಿರುವೆ. ಬಿಜೆಪಿಯ ಎರಡನೇ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಖಚಿತ. ರಾಜ್ಯಸಭೆಯಲ್ಲಿ ಬಹುಮತ ಕೊರತೆ ಇದೆ. ಮುಂದಿನ ವರ್ಷ ರಾಜ್ಯಸಭೆಯಲ್ಲಿಯೂ ಬಹುಮತ ಬರಲಿದೆ. ಸುಪ್ರೀಂ ಕೋರ್ಟ್ ಮೇಲೆ ನಮಗೆ ವಿಶ್ವಾಸವಿದೆ. ತೀರ್ಪು ನಮ್ಮ ಪರ ಬರಲಿದೆ ಎನ್ನುವ ವಿಶ್ವಾಸವಿದೆ. ಮಮತಾ ಬ್ಯಾನರ್ಜಿಯ ಬಗ್ಗೆ ಬಹಳ ಗೌರವ ಇತ್ತು. ಆದರೆ ಈಗ ಅಸಮಾಧಾನವಿದೆ. ಶ್ರೀರಾಮ ಅನ್ನೋ ಹೆಸರನ್ನು ವಿವಾದ ಮಾಡ್ತಿದ್ದಾರೆ. ಅವರ ನಿಲುವು ರಾಷ್ಟ್ರ ವಿರೋಧಿತನ ತೋರಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಪರ ಅಸಮಧಾನ ಹೊರಹಾಕಿದರು.

Comments are closed.