ಕರ್ನಾಟಕ

ಲೇಡಿಸ್​ ಹಾಸ್ಟೆಲ್ ಗೆ​ ನಡುರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಟವರ್​ ಏರಿ ಬಂದ ವ್ಯಕ್ತಿ!

Pinterest LinkedIn Tumblr


ಹಾಸನ: ಅಪರಿಚಿತ ವ್ಯಕ್ತಿನೋರ್ವ ಮುಖಕ್ಕೆ ಬಟ್ಟೆ ಕಟ್ಟಿಗೊಂಡು ಟವರ್​ ಏರಿ ಲೇಡಿಸ್​​ ಹಾಸ್ಟೆಲ್​​ಗೆ ನಿನ್ನೆ ನಡುರಾತ್ರಿಯಲ್ಲಿ ಎಂಟ್ರಿ ಕೊಟ್ಟ ಘಟನೆಯೊಂದು ಹಾಸನದ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಘಟನೆಯೊಂದು ನಡೆದಿದೆ.

ನಿನ್ನೆ ರಾತ್ರಿ 2 ಗಂಟೆ 43 ನಿಮಿಷಕ್ಕೆ ಹಾಸ್ಟಲ್​ಗೆ ಬಂದಿದ್ದಾನೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯರು ಗಾಬರಿಯಿಂದ ಕಿರುಚಾಡುತ್ತಿದ್ದನ್ನು ಕೇಳಿಸಿಕೊಂಡ ಆ ವ್ಯಕ್ತಿ ಟವರ್​​ನಿಂದ ಇಳಿದು ಓಡಿದ್ದಾನೆ. ಈ ದೃಶ್ಯವು ಸಿಸಿಟಿವಲ್ಲಿ ಸೆರೆಯಾಗಿದ್ದು, ಬೆಳಿಗ್ಗೆ ಅದನ್ನು ಪರಿಶೀಲನೆ ಮಾಡಿದಾಗ ಅಪರಿಚಿತ ವ್ಯಕ್ತಿ ಹಾಸ್ಟೆಲ್ ಗೆ ಬಂದಿರೊದು ಘಟನೆ ಬೆಳಕಿಗೆ ಬಂದಿದೆ.

ಹಾಸನದ ಬಡಾವಣೆ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ನಗರದಲ್ಲಿ ರಾತ್ರಿ ಹೊತ್ತಲ್ಲಿ ಕಾಮುಕರ ಕಾಟ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ ಮೂರು ಬಾರಿ ಇಂತಹ ಘಟನೆಯು ಸಂಭವಿಸಿದೆ.

Comments are closed.