ಕರ್ನಾಟಕ

ಬಿಜೆಪಿ ಸೇರುವ ಕುರಿತು ಕಂಪ್ಲಿ ಶಾಸಕ ಗಣೇಶ್ ಮಾತು..!

Pinterest LinkedIn Tumblr


ಕಂಪ್ಲಿ ಶಾಸಕ ಗಣೇಶ್ ರೆರ್ಸಾಟ್‌ನಲ್ಲಿ ಕುಡಿದ ಮತ್ತಿನಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರೂ. ಶಾಸಕರ ಈ ಗಲಾಟೆ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಶಾಸಕ ಜೆ ಎನ್ ಗಣೇಶರನ್ನ ಪಕ್ಷದಿಂದ ಅಮಾನತು ಮಾಡಿ ಪಕ್ಷದಿಂದ ಹೊರಹಾಕಿತ್ತು.

ಆದ್ರೆ ಯಾವಾಗ ಗಣೇಶ್ ಅಮಾನತು ವಾಪಸ್ ಪಡೆಯಬೇಕು, ಇಲ್ಲದಿದ್ದರೇ ನನ್ನ ದಾರಿಗೆ ನನಗೆ ಅಂತಾ ಗುಟುರು ಹಾಕಿದ್ರೋ ಕಾಂಗ್ರೆಸ್ ಪಕ್ಷ ಶಾಸಕ ಗಣೇಶ ಅಮಾನತು ವಾಪಸ್ ಪಡೆದಿದೆ. ಗಲಾಟೆ ಪ್ರಕರಣದ ಬಗ್ಗೆ ಡಿಸಿಎಂ ಪರಮೇಶ್ವರ್, ಸಚಿವರಾದ ಕೃಷ್ಣ ಭೈರೇಗೌಡ, ಜಾರ್ಜ್ ನೀಡಿದ ವರದಿ ಆಧರಿಸಿ ಕಂಪ್ಲಿ ಶಾಸಕ ಗಣೇಶರ ಅಮಾನತು ವಾಪಸ್ ಪಡೆದಿದ್ದಾರೆ.

ಅಮಾನತು ವಾಪಸ್ ಪಡೆದಿರೋ ಪ್ರತಿ ಸಹ ಕೆಪಿಸಿಸಿಯಿಂದ ಬಿಡುಗಡೆಯಾಗಿದ್ದು. ಶಾಸಕ ಗಣೇಶ್ ಸಹ ನನ್ನ ಅಮಾನತು ವಾಪಸ್ ಪಡೆದಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ, ಅಲ್ಲದೇ ನಾನು ಬಿಜೆಪಿಗೆ ಹೋಗಲ್ಲ. ಯಾವ ಶಾಸಕರು ಸಹ ಪದೇ ಪದೇ ಚುನಾವಣೆಗೆ ಹೋಗಲು ಸಿದ್ದರಿಲ್ಲ, ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸುಭದ್ರವಾಗಿದೆ. ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ನಾಯಕರು. ಅವರನ್ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ, ರಮೇಶ್ ಜಾರಕಿಹೊಳಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡಬೇಕು ಅಂತಾ ಹೇಳಿದ್ದಾರೆ.

ಬಳ್ಳಾರಿಯಲ್ಲಿಂದು ಕಂಪ್ಲಿ ಶಾಸಕ ಮಾಧ್ಯಮಗಳ ಮುಂದೆ ಮಾತನಾಡಿ ನಾನು ಆನಂದಸಿಂಗ್ ಒಳ್ಳೆಯ ಸ್ನೇಹಿತರು. ನನ್ನ ಅಮಾನತು ಪಕ್ಷ ವಾಪಸ್ ಪಡೆದಿರೋದು ಸಂತಸ ತಂದಿದೆ ಅಂತಾ ಹೇಳಿದ್ದಾರೆ. ಹೀಗಾಗಿ ಗಣೇಶ್ ಬೆದರಿಕೆಗೆ ಹೆದರಿ ಅಮಾನತು ವಾಪಸ ಪಡೆದ್ರೋ ಇಲ್ವೋ ಬಿಜೆಪಿ ಆಪರೇಷನ್‌ಗೆ ಹೆದರಿ ಕಾಂಗ್ರೆಸ್ ಶಾಸಕರು ಗಣೇಶ್ ಅಮಾನತು ವಾಪಸ್ ಪಡೆದ್ರೋ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

Comments are closed.