ಕರ್ನಾಟಕ

ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯಿಂದ ರಮ್ಯಾಗೆ ಗೇಟ್ ಪಾಸ್..?

Pinterest LinkedIn Tumblr


ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರ ಅಧಿಕೃತ ಟ್ವಿಟರ್ ಅಕೌಂಟ್ ಡಿಲೀಟ್ ಆಗಿದೆ. ಇದರಿಂದ ಸೋಷಿಯಲ್ ಮೀಡಿಯಾ ಹುದ್ದೆಯಿಂದ ಕಾಂಗ್ರೆಸ್ ರಮ್ಯಾಗೆ ಗೇಟ್ ಪಾಸ್ ಕೊಟ್ಟಿದ್ಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಈ ಬಗ್ಗೆ ರಮ್ಯಾ ಅವರಿಂದಲೇ ಆಗಲಿ ಅಥವಾ ಪಕ್ಷದಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ರಮ್ಯಾ ತಮ್ಮ ಖಾತೆಯಲ್ಲಿರುವ ಟ್ವೀಟ್ ತೆರವುಗೊಳಿಸಿರೋದು ಯಾಕೆ..? ಅವರ ಟ್ವಿಟರ್ ಖಾತೆಯಲ್ಲಿ ಹಳೆ ಟ್ವೀಟ್ ಗಳು ಡೀಲಿಟ್ ಆಗಿರೋದ್ಯಾಕೆ? ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಹಿನ್ನೆಲೆ ಈ ಬದಲಾವಣೆ ನಡೆದಿರಬಹುದಾ..? ಒಂದಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿವಿಗಳಲ್ಲಿ ಯಾರು ಕಾಣಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಆದೇಶ ನೀಡಿರೋದು ಇದಕ್ಕೆ ಕಾರಣ ನಾ..? ಎಂಬ ಪ್ರಶ್ನೆ ಉದ್ಭವಿಸಿದೆ.

Comments are closed.