ಕರ್ನಾಟಕ

ರಮೇಶ್​ ಜಾರಕಿಹೊಳಿಗೆ ‘ಇಂಧನ ಖಾತೆ’: ಸಚಿವ ಎಂಬಿ ಪಾಟೀಲ್​ ಹೇಳಿದ್ದೇನು?

Pinterest LinkedIn Tumblr


ಬೆಳಗಾವಿ: ಸಂಪುಟ ವಿಸ್ತರಣೆ ಮಾಡುವ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು ಈ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳತ್ತಾರೆ ಇದರ ಬಗ್ಗೆ ಈಗಾಗಲೇ ರಾಜ್ಯ ಕಾಂಗ್ರೆಸ್​​ ಉಸ್ತುವರಿ ಕೆ.ಸಿ ವೇಣುಗೋಪಾಲ ಅವರು ಸಭೆ ನಡೆಸಿದ್ದಾರೆ ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್​ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ಮಾಧ್ಯಕ್ಕೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಮಾಡೋದು ಬಿಡೋದು ಬಗ್ಗೆ ಇನ್ನೂ ನಿರ್ಣಯವಾಗಿಲ್ಲ. ಕಾಂಗ್ರೆಸ್ಸಿನ ಅತೃಪ್ತ ಶಾಸಕರನ್ನು ಸಿಎಂ ಮನವೊಲಿಸುವ ಕೆಲಸ ತಪ್ಪಲ್ಲ ಎಂದು ಅವರು ಹೇಳಿದರು.

ಇನ್ನು ಗೋಕಾಕ್​ ಕಾಂಗ್ರೆಸ್​ ರೆಬೆಲ್ ಶಾಸಕ ರಮೇಶ್​ ಜಾರಕಿಹೊಳಿ ಮನವೊಲಿಸುವ ವಿಚಾರವಾಗಿ ಮಾತನಾಡಿದ ಅವರು, ನನಗೆ ರಮೇಶ್​ ಜಾರಕಿಹೊಳಿ ಆತ್ಮೀಯ ಸ್ನೇಹಿತರು. ಅವರ ಮನವೊಲಿಸುವ ಪ್ರಯತ್ನ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಅಲ್ಲದೇ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಅವರು ಲಕ್ಷ್ಮಣ ರೇಖೆ ದಾಟಿದ್ದಾರೆ. ಒಂದೊಂದು ಸಲ ಲಕ್ಷ್ಮಣ ರೇಖೆ ದಾಟಿದಾಗ ಪಕ್ಷ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್​, ನಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಭ್ರವಾಗಿ ನಡೆಯಲಿದೆ. ಈ ಹಿಂದೆ ದೀಪಾವಳಿ, ಯುಗಾದಿ, ಅಧಿವೇಶನ ಆಯ್ತು. ಅಮಾವ್ಯಾಸೆ ಆಯ್ತು, ಹುಣ್ಣಿಮೆ ಆಯ್ತು. ಲೋಕಸಭೆ ಚುನಾವಣೆ ಆಯ್ತು. ಮೇ೨೩ ಆಯ್ತು ಈಗ ಜೂನ್1 ಆಯ್ತು. ಹಿಂದೇನು ಮುಖಭಂಗವಾಗಿದೆ. ಮುಂದೇನು ಮುಖಭಂಗ ಆಗುತ್ತೆ ಎಂದು ಅವರು ನುಡಿದರು.

ಸದ್ಯ ಯಾವುದೇ ಕಾರಣಕ್ಕೂ ದೋಸ್ತಿ ಸರ್ಕಾರ ಬೀಳಿಸಲು ಆಗಲ್ಲ. ರಮೇಶ್​ ಜಾರಕಿಹೊಳಿ ಇಂಧನ ಖಾತೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹ ಖಾತೆ ಸಚಿವ ಎಂ.ಬಿ ಪಾಟೀಲ್​ ಮಾತನಾಡಿದರು.

Comments are closed.