ಕರ್ನಾಟಕ

ಬಾಯಿ ಹುಣ್ಣಿಗೆ ಬೇಸತ್ತು ಅಪಾರ್ಟ್​​ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Pinterest LinkedIn Tumblr


ಬೆಂಗಳೂರು: ಸಾಮಾನ್ಯವಾಗಿ ಬಾಯಲ್ಲಿ ಹುಣ್ಣಾದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ. ಆಗಲೂ ಕಡಿಮೆ ಆಗದಿದ್ದರೆ ಅದು ಗುಣವಾಗುವವರೆಗೆ ಅದನ್ನು ಸಹಿಸಿಕೊಂಡು ಹೋಗುತ್ತೇವೆ. ಆದರೆ, ಬೆಂಗಳೂರಿನ ಮಹಿಳೆ ಬಾಯಲ್ಲಾದ ಹುಣ್ಣಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣ ಸಾಕಷ್ಟು ಅನುಮಾಗಳಿಗೆ ಕಾರಣವಾಗಿದೆ.

45 ವರ್ಷದ ಶುಭಾ ಮೃತ ಮಹಿಳೆ. ಹುಳಿಮಾವಿನ ಅಪಾರ್ಟ್​​ಮೆಂಟ್​ ಒಂದರಲ್ಲಿ 8 ವರ್ಷದ ಮಗು, ತಂದೆ ಹಾಗೂ ಅಣ್ಣನ ಕುಟುಂಬದ ಜೊತೆ ಶುಭಾ ವಾಸವಾಗಿದ್ದಳು. ಈಕೆಯ ಪತಿ ಮಲೇಷಿಯಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಶುಭಾ ಬಾಯಲ್ಲಿ ಹುಣ್ಣೊಂದು ಕಾಣಿಸಿಕೊಂಡಿತ್ತು. ಎಷ್ಟೇ ಔಷಧಿ ಮಾಡಿದರೂ ಅದು ಕಡಿಮೆ ಆಗಿರಲಿಲ್ಲ.

ಈ ವಿಚಾರಕ್ಕೆ ಶುಭಾ ಬೇಸತ್ತಿದ್ದಳು ಎನ್ನಲಾಗಿದೆ. ಶನಿವಾರ ಈಕೆ ಅಪಾರ್ಟ್​​ಮೆಂಟ್​ನ ಟೆರೇಸ್​ಗೆ ಹೋಗಿದ್ದಳು. ಈ ವೇಳೆ ಏಕಾಏಕಿ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಈಕೆ ಕಳೆದ 20 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Comments are closed.