ಕ್ರೀಡೆ

ಗಾಯ ಹಿನ್ನಲೆ: ಕೊಹ್ಲಿ ವಿಶ್ವಕಪ್​ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ!

Pinterest LinkedIn Tumblr


ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ಸಾರಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್​ ಜೂನ್​ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಆಡಬೇಕಿರುವಾಗಲೇ ವಿರಾಟ್​​ ತರಬೇತಿ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ಸೌತಾಂಪನ್​ನಲ್ಲಿ ನಡೆಯುತ್ತಿದ್ದ ತರಬೇತಿ ವೇಳೆ ನಾಯಕ ವಿರಾಟ್​ ಕೊಹ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಇನ್ನು ವಿಶ್ವಕಪ್​ನ ಮೊದಲ ಪಂದ್ಯ ಇನ್ನು ಕೇವಲ ಮೂರುದಿನ ಇರುವಾಗಲೇ ಎಂದು ಹಿಂದೂಸ್ಥಾನ್​ ಟೈಂ ರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.

ಹೀಗಾಗಿ ಅವರು ನೇಟ್​ ಪ್ರಾಕ್ಟೀಸ್​ ನಲ್ಲಿ ಸರಿಯಾಗಿ ಬ್ಯಾಟಿಂಗ್​ ಅಭ್ಯಾಸ ನಡೆಸಲು ಸಾಧ್ಯವಾಗದಿದ್ದರೆ ವಿರಾಟ್​​ ಕೊಹ್ಲಿ ಪಂದ್ಯವಾಡುವುದು ಕಷ್ಟವಾಗಲಿದೆ. ಜೊತೆ ಅವರಿಗಾಗಿ ವೈದ್ಯರು ಸಾಕಷ್ಟು ಸಮಯ ಕೊಟ್ಟು ಚಿಕಿತ್ಸಾ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಅದುವಲ್ಲದೇ ಗಾಯವಾದ ಸ್ಥಳದಲ್ಲಿ ತಕ್ಷಣವೇ ಐಸ್​ಕಪ್​ನೊಳಗೆ ಬೆರಳನ್ನು ಹಾಕಲಾಗಿತ್ತು.

ಸದ್ಯ ಭಾರತ ತಂಡದಿಂದ ವಿರಾಟ್​ ಕೊಹ್ಲಿ ಅವರಿಗೆ ಗಾಯವಾಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಜೊತೆಗೆ ಅವರು ದಕ್ಷಿಣ ಆಫ್ರಿಕಾದ ಮೊದಲ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎಂದು ತಿಳಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೂನ್​ 05ರಂದು ಭಾರತಕ್ಕೆ ಮೊದಲ ಪಂದ್ಯ, ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರನೇ ಪಂದ್ಯವಾಗಲಿದೆ. ಆಫ್ರಿಕಾ ಮೊದಲ ಪಂದ್ಯವನ್ನು ಇಂಗ್ಲೆಂಡ್​​ ಆಡಿ ಸೋತಿದೆ. ಇಂದು ಬಾಂಗ್ಲಾದೇಶದ ವಿರುದ್ಧ ಎರಡನೇ ಪಂದ್ಯವನ್ನು ಆಡುತ್ತಿದೆ. ಭಾರತವು ಜೂನ್​ 09ರಂದು ಆಸ್ಟ್ರೀಲಿಯಾ ತಂಡದೊಟ್ಟಿಗೆ ಸೆಣಸಾಟ ನಡೆಸಲಿದೆ.

Comments are closed.