ಕರ್ನಾಟಕ

ನಿರ್ಮಲಾ ಸೀತಾರಾಮನ್‌ ಅವರಿಗೆ ಟ್ವೀಟ್‌ ಮಾಡಿದ ರಮ್ಯಾ ವ್ಯಂಗ್ಯವಾಗಿ ಹೇಳಿದ್ದೇನು?

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಶುಭಕೋರಿರುವ ಜತೆಗೆ ವ್ಯಂಗ್ಯಭರಿತ ಟ್ವೀಟ್​ ಮಾಡಿ ಇದೀಗ ಸುದ್ದಿಯಾಗಿದ್ದಾರೆ.

ಟ್ವೀಟ್‌ ಮೂಲಕ ಸಚಿವೆ ನಿರ್ಮಲಾ ಸೀತರಾಮನ್​ಗೆ ಶುಭೋಕೋರಿರುವ ರಮ್ಯಾ ಅವರು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ.

1970ರಲ್ಲಿ ಇಂದಿರಾಗಾಂಧಿ ಅವರು ಮಾತ್ರ ನಿಭಾಯಿಸಿದ್ದ ಹಣಕಾಸು ಖಾತೆಯನ್ನು ಇಂದು ನೀವು ನಿಭಾಯಿಸಲು ಮುಂದಾಗಿದ್ದೀರಿ. ಮಹಿಳೆಯರಿಗೆ ಇದರಿಂದ ಹೆಮ್ಮೆಯಾಗುತ್ತಿದೆ. ಜಿಡಿಪಿ ಸುಧಾರಿಸಿಲ್ಲ. ನೀವು ಅರ್ಥವ್ಯವಸ್ಥೆಗೆ ಚೇತರಿಕೆ ತರುತ್ತೀರಿ ಎಂದು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ. ಶುಭಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರ ಮುಂದೆ ಬಹುದೊಡ್ಡ ಆರ್ಥಿಕ ಸವಾಲಿದ್ದು, ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆಯನ್ನು ತಡೆಯಲು ಮತ್ತು ವೇಗವಾಗಿ ಬೆಳೆಯುತ್ತಿರುವ ವಿಶ್ವದ ಆರ್ಥಿಕತೆಯೊಂದಿಗೆ ಭಾರತದ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಬಳಕೆ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕಿರುವ ಅನಿವಾರ್ಯತೆಯಿದೆ.

ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಾಲ್ಕನೇ ತ್ರೈಮಾಸಿಕಕ್ಕೆ ಮತ್ತು ಮಾರ್ಚ್ 2019ರ ಅಂತ್ಯಕ್ಕೆ ಭಾರತದ ಜಿಡಿಪಿ(Gross Domestic Product) ಶೇ. 5.8ಕ್ಕೆ ಕುಸಿದಿದೆ ಎಂದು ತಿಳಿದುಬಂದಿದ್ದು, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಕೆಲಕಾಲ ಹಣಕಾಸು ಇಲಾಖೆಯ ಹೊಣೆ ಹೊತ್ತಿದ್ದರು. ಇದೀಗ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವಾಲಯದ ಹೊಣೆ ಹೊತ್ತಿದ್ದಾರೆ.

ರಮ್ಯಾ ಅವರ ಟ್ವೀಟ್‌ಗೆ ಸಾಕಷ್ಟು ವ್ಯಂಗ್ರಮಿಶ್ರಿತ ಪ್ರತಿಕ್ರಿಯೆಗಳು ಹೊರಬಂದಿದ್ದು, ಮತ ಚಲಾವಣೆ ಮಾಡದ ಅವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

Comments are closed.