ಕರ್ನಾಟಕ

15 ದಿನದಲ್ಲಿ 1 ಲಕ್ಷಕ್ಕೆ 2 ಲಕ್ಷ ಮಾಡಿಕೊಡುವುದಾಗಿ ನಂಬಿಸಿ ಪಂಗನಾಮ!

Pinterest LinkedIn Tumblr


ಬೆಂಗಳೂರು: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಜನರಿಂದ ಹಣ ಕಟ್ಟಿಸಿಕೊಂಡು ನಂತರ ಪರಾರಿಯಾಗುವ ಘಟನೆಗಳು ದಿನನಿತ್ಯ ವರದಿಯಾಗುತ್ತಿದ್ದರು ಜನರು ಮಾತ್ರ ಮತ್ತೆ ಮತ್ತೆ ಅಂತಹ ವಂಚನೆಗೆ ಬಲಿಪಶುಗಳಾಗುತ್ತಾರೆ. ಇದೀಗ ಬೆಂಗಳೂರಿನಲ್ಲೂ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಒಂದು ಲಕ್ಷ ಹೂಡಿಕೆ ಮಾಡಿದರೆ ಹದಿನೈದು ದಿನದಲ್ಲಿ 2 ಲಕ್ಷ ನೀಡುವುದಾಗಿ ಆರ್​ಟಿ ನಗರದ ಎಜಿಐಎಂ ಎಂಬ ಕಂಪನಿ ಹೇಳಿದೆ. ಹಣ ದುಪ್ಪಟ್ಟು ಸಿಗುವುದಾಗಿ ಆಸೆಗೆ ಬಿದ್ದ ಪುರುಷೋತ್ತಮ್ ಎಂಬುವವರು 9 ಲಕ್ಷ ಹಣ ಹೂಡಿದ್ದಾರೆ. ಅದೇ ರೀತಿ ತಮ್ಮ ಗೆಳೆಯರನ್ನು ಸೇರಿಸಿದರೆ ಶೇ.5ರಷ್ಟು ಹೆಚ್ಚುವರಿ ಹಣ ನೀಡುವುದಾಗಿಯೂ ಆಮಿಷ ಒಡ್ಡಲಾಗಿದೆ. ಅದರಂತೆ ತನ್ನ ಗೆಳೆಯರಿಗೆ ಹಣ ಹೂಡಿಕೆ ಮಾಡುವಂತೆ ಪುರುಷೋತ್ತಮ್ ಸೂಚಿಸಿದ್ದರು. ನೂರಾರು ಮಂದಿ ಈ ಬೋಗಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಹಣ ಪಡೆದ ಬಳಿಕ ಹಣ ನೀಡದೆ ಸತಾಯಿಸಿದ್ದಾರೆ. ಇದರಿಂದ ಕಂಗಾಲಾದ ಗ್ರಾಹಕರು​ ಆರ್​.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ತನಿಖೆ ನಡೆಸಿ ಎಜಿಐಎಂನ ಚಂದೇಶ್ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

Comments are closed.