ಕರ್ನಾಟಕ

ತುಮಕೂರಲ್ಲಿ ಮೋದಿ ಪರ ಪ್ರಚಾರ ಮಾಡಿದ್ದರ ಕುರಿತು ಹೇಳಿದ ವೃದ್ಧ ಮಹಿಳೆ!

Pinterest LinkedIn Tumblr


ತುಮಕೂರು: ನರೇಂದ್ರ ಮೋದಿ 2ನೇ ಬಾರಿ ಪ್ರಧಾನಮಂತ್ರಿ ಆಗಿ ಪ್ರಮಾಣವಚನ ಮಾಡೋದಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಇದೇ ವೇಳೆ ರಾಜ್ಯದ ವೃದ್ಧ ಮಹಿಳೆಯೊಬ್ಬರು ಮೋದಿ ಬಗ್ಗೆ ಇರೋವ ಅಭಿಮಾನವನ್ನು ತೋರಿಸಿರುವ ವಿಡಿಯೋ ಸಾರ್ವಜಿಕ ವಲಯದಲ್ಲಿ ವೈರಲ್​ ಆಗಿ ಹರಿದಾಡುತ್ತಿವೆ.

ತುಮಕೂರಿನ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ವೃದ್ಧೆ ಮಹಿಳೆ ಮೋದಿಗೆ ವೋಟ್ ಹಾಕುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಇವರು ಮೂಲತಃ ಸಿದ್ದೇಗುಂಟೆ ಗ್ರಾಮದ ನಿವಾಸಿಯಾಗಿದ್ದಾರೆ.

ಮೈತ್ರಿ ಸಮಾವೇಶದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಈ ವೃದ್ಧ ಮಹಿಳೆ ಅಲ್ಲಿಯೇ ಇದ್ದರು ಆಗ ಪ್ರಧಾನಿ ಮೋದಿಗೆ ಮೈತ್ರಿ ಮುಖಂಡರು ಬೈಯುತ್ತಿದ್ದರಂತೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್.ಡಿ ದೇವೇಗೌಡ ಹಾಜರಿದ್ದರು.

ಆಗ ಪುಲ್ವಾಮಾ ದಾಳಿ ಸ್ವತಃ ಮೋದಿಯೇ ಮಾಡಿಸಿದ್ದರು. ಸೈನಿಕರ ಸಾವಿಗೆ ಕಾರಣರಾದ್ದರು ಅಂದರಂತೆ ಮೈತ್ರಿ ಮುಖಂಡರು. ಈ ಮಾತು ಕೇಳಿ ಕೋಪಗೊಂಡ ವೃದ್ಧ ಮಹಿಳೆ ಸಮಾವೇಶದಿಂದ ಹೊರ ನಡೆದು ಬಂದರಂತೆ ಬಳಿಕ ಊರೂರು ಸುತ್ತಿ ಮೋದಿಗೆ ಮತಹಾಕುವಂತೆ ಪ್ರಚಾರ ಮಾಡಿದ್ರಂತೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಆ ವೃದ್ಧ ಮಹಿಳೆ ಕೋಪಗೊಂಡಿದ್ದು ತನ್ನ ಮಗನೂ ದೇಶ ಕಾಯುತಿದ್ದಾನೆ. ನನಗೂ ಗೊತ್ತು ಮೋದಿ ಒಳ್ಳೆಯ ಕೆಲಸ. ಇವರು ಅಪಪ್ರಚಾರ ಮಾಡುತಿದ್ದರು. ಹಾಗಾಗಿ ನಾನು ಮೋದಿ ಪರ ಪ್ರಚಾರ ಮಾಡ್ದೆ ಎಂದು ವೃದ್ಧ ಮಹಿಳೆಯೊಬ್ಬರು ಮಾತನಾಡಿದ ವಿಡಿಯೋ ಸಖತ್​ ವೈರಲ್ ಆಗಿದೆ.

Comments are closed.