ಕರ್ನಾಟಕ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ; ಪ್ರತಿ ಯೂನಿಟ್ ಗೆ 33 ಪೈಸೆ ಏರಿಕೆ

Pinterest LinkedIn Tumblr

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಯಾಗಿದ್ದು, ಪ್ರತಿ ಯೂನಿಟ್‌ ಸರಾಸರಿ 33 ಪೈಸೆ ಏರಿಕೆಯಾಗಿದೆ. ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜೆಸ್ಕಾಂ – ಒಟ್ಟಾರೆ 5 ವಿದ್ಯುತ್‌ ಸರಬರಾಜು ಕಂಪನಿಯಲ್ಲಿ ವಿದ್ಯುತ್‌ ದರ ಹೆಚ್ಚಳವಾಗಿದೆ.

2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಕುರಿತು ಪ್ರಕಟನೆ ಹೊರಡಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ. ಬೆಸ್ಕಾಂ ಪ್ರತಿ ಯೂನಿಟ್ ಗೆ 1.01 ರೂ. ಏರಿಕೆಗೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು‌. ಆದರೆ ಕೆಇಆರ್ಸಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೆಸ್ಕಾಂ 33 ಪೈಸೆ
ಮೆಸ್ಕಾಂ ಒಂದು ಯೂನಿಟ್ ವಿದ್ಯುತ್ ಗೆ 1.38 ಪೈಸೆ ಏರಿಕೆ ಕೋರಿತ್ತು. ಕೆಇಆರ್ ಸಿ ಸರಾಸರಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ.

ಚೆಸ್ಕಾಂ 33 ಪೈಸೆ
ಚೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ. ಏರಿಕೆ ಕೋರಿತ್ತು. ಕೆಇಆರ್ ಸಿ ಸರಾಸರಿ 33 ಪೈಸೆ ಏರಿಕೆಗೆ ಸಮ್ಮತಿ ಸೂಚಿಸಿದೆ

ಹೆಸ್ಕಾಂ 33 ಪೈಸೆ
ಹೆಸ್ಕಾಂ 1.63 ರೂ ಏರಿಕೆ ಕೋರಿತ್ತು. ಪ್ರತಿ ಯೂನಿಟ್ ಗೆ ಸರಾಸರಿ 33 ಪೈಸೆ ಏರಿಕೆಗೆ ಕೆಇಆರ್ ಸಿ ಸಮ್ಮತಿ ನೀಡಿದೆ.

ಜೆಸ್ಕಾಂ 33 ಪೈಸೆ
ಜೆಸ್ಕಾಂ 1.27 ಪೈಸೆ ಏರಿಕೆಗೆ ಕೋರಿತ್ತು. ಕೆಇಆರ್ಸಿ ಸರಾಸರಿ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ.

ಒಟ್ಟಾರೆ 5 ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸರಾಸರಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ.

Comments are closed.