ಕರ್ನಾಟಕ

ಇವರು ಈ ಸಲದ ಆಪರೇಷನ್ ಕಮಲದ ರೂವಾರಿ!

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ದೇಶಾದ್ಯಂತ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ರಾಜ್ಯದ ಕಮಲದ ನಾಯಕರಿಗೆ ಒಂದು ಹೊಸಹುರುಪು ಸಿಕ್ಕಂತಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಹೇಗಾದ್ರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಕಾರಣಕ್ಕೆ ಆಪರೇಷನ್ ಕಮಲ ಶುರು ಮಾಡಲು ಮುಂದಾಗಿದ್ದಾರೆ.

ಶಾಸಕ ಶ್ರೀರಾಮುಲು, ಶಾಸಕ ಅಶ್ವಥ್ ನಾರಾಯಣ, ಸಿ.ಪಿ ಯೋಗೇಶ್ವರ್, ಆರ್​.ಅಶೋಕ್ ಎಲ್ಲಾ ನಾಯಕರೂ ಆಪರೇಷನ್ ಕಮಲ ನಿಭಾಯಿಸುವಲ್ಲಿ ವಿಫಲ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಈ ಬಾರಿ ಸೈಲೆಂಟಾಗಿ ಎಚ್ಚರಿಕೆಯಿಂದಲೇ ಆಪರೇಷನ್ ಕಮಲ ನಿಭಾಯಿಸುವ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿಗೆ ನೀಡಿದ್ದಾರೆ.

ಜೂನ್ 1ರಂದು ಬಿಜೆಪಿ ಶಾಸಕರು, ಸಂಸದರ ಸಭೆ ಕರೆಯಲಾಗಿದ್ದು, ಸಭೆ ಬಳಿಕ ಬಿಜೆಪಿ ಆಪರೇಷನ್ ಕಮಲಕ್ಕೆ ವೇಗ ಪಡೆದುಕೊಳ್ಳಲಿದೆ. ಹೀಗಾಗಿ ಜೂನ್ ಮೊದಲ ವಾರದ ಬಳಿಕ ಬಿಜೆಪಿ ಅಸಲಿ ಆಟ ಶುರು ಮಾಡಲಿದ್ದಾರೆ. ಬಿಜೆಪಿ ನಾಯಕರ ಚರ್ಚೆಯ ನಂತರ ಕಾಂಗ್ರೆಸ್​ ಅತೃಪ್ತರ ರಾಜೀನಾಮೆಗೆ ಅಖಾಡ ಸಿದ್ಧವಾಗಬಹುದು.

ಈ ಪ್ಲಾನ್​ ಅಂದುಕೊಂಡಂತೆ ನಡೆದರೆ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಟೀಂ ರಾಜ್ಯಪಾಲರ ಭೇಟಿ ಮಾಡಿ ಮೈತ್ರಿ ಪಕ್ಷವೂ ಬಹುಮತ ಸಾಬೀತುಪಡಿಸುವಂತೆ ಒತ್ತಾಯ ಮಾಡಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನವನ್ನು ಪಡೆದುಕೊಂಡು ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್​ 80 ಸ್ಥಾನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಜೆಡಿಎಸ್​ 37 ಸ್ಥಾನ ಹಾಗೂ ಬಿಎಸ್​​ಪಿ 1 ಸ್ಥಾನ ಪಡೆದುಕೊಂಡಿತ್ತು

Comments are closed.