ಕರ್ನಾಟಕ

ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಡುತ್ತೇನೆ ಎಂದ ನಾಯಕ: ಗೌಡರು ಹೇಳಿದ್ದೇನು ಗೊತ್ತಾ?

Pinterest LinkedIn Tumblr


ಬೆಂಗಳೂರು: ಸತತ ಆರು ದಶಕದಿಂದ ಅಧಿಕಾರದ ಕುರ್ಚಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತು ಹೋಗಿದ್ದಾರೆ. ಅವರ ಸೋಲು ಸಹಜವಾಗಿಯೇ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ನುಂಗಲಾರದ ತುತ್ತಾಗಿದೆ. ಸೋಲಿನಿಂದ ಕಂಗೆಟ್ಟಿರುವ ದೇವೇಗೌಡರನ್ನು ಮತ್ತೆ ಸಂಸತ್ತಿಗೆ ಕಳಿಸಲೇಬೇಕು ಎಂದು ಜೆಡಿಎಸ್ ನಾಯಕರು ತೀರ್ಮಾನಿಸಿದ್ದು, ಅದಕ್ಕಾಗಿ ಒಬ್ಬರು ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದರು. ಹಾಗಾದರೆ ದೇವೇಗೌಡರಿಗೆ ಸ್ಥಾನ ತ್ಯಾಗ ಮಾಡಲು ಸಿದ್ಧರಾಗಿರುವ ಸಂಸದರು ಯಾರು? ಅವರಿಗೆ ದೇವೇಗೌಡರು ಏನು ಹೇಳಿದರು ಎಂಬ ಡಿಟೈಲ್ ಸ್ಟೋರಿ ಇಲ್ಲಿದೆ.

ಲೋಕಸಭೆ ಸೋಲಿನಿಂದ ದೇವೇಗೌಡರು ನೊಂದಿದ್ದಾರೆ. ನೊಂದಿರುವ ಗೌಡರನ್ನು ಸಂಸತ್ ಪ್ರವೇಶ ಮಾಡಿಸಬೇಕು. ಅದಕ್ಕಾಗಿ ಅವರನ್ನು ರಾಜ್ಯಸಭೆಗೆ ಕಳಿಸಲು ತೀರ್ಮಾನ ಮಾಡಲಾಗಿತ್ತು. ಇವರನ್ನು ರಾಜ್ಯಸಭೆಗೆ ಕಳುಹಿಸಲು ತಮ್ಮ ಸ್ಥಾನ ಬಿಟ್ಟುಕೊಡಲು ಕುಪೇಂದ್ರ ರೆಡ್ಡಿ ಸಿದ್ಧರಾಗಿದ್ದರು. ಇದೇ ಉದ್ದೇಶದೊಂದಿಗೆ ರೆಡ್ಡಿ ಅವರು ಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕಾವೇರಿ ವಿಚಾರ ಸಂಸತ್​ನಲ್ಲಿ ಬಂದರೆ ಅದರ ಬಗ್ಗೆ ಧ್ವನಿ ಎತ್ತುವವರು ಯಾರು? ರಾಜ್ಯಕ್ಕೆ ಅನ್ಯಾಯವಾದರೆ ಮೋದಿಗೆ ಪ್ರಶ್ನೆ ಮಾಡುವವರು ಯಾರು? ಬಿಜೆಪಿ ಸಂಸದರ್ಯಾರು ಪಿಎಂ ಮೋದಿ‌ ಪ್ರಶ್ನೆ ಮಾಡುವ ಧೈರ್ಯ ಮಾಡಲ್ಲ. ಕನಿಷ್ಠ ಮನವಿ ಮಾಡುವ ಧೈರ್ಯವನ್ನು ತೋರುವುದಿಲ್ಲ. ಇಂತಹ ವಿಚಾರದಲ್ಲಿ ಧೈರ್ಯವಾಗಿ ರಾಜ್ಯದ ಪರವಾಗಿ ಮಾತನಾಡುವ ಏಕೈಕ ವ್ಯಕ್ತಿ ಅಂದರೆ ಅದು ದೇವೇಗೌಡರು ಮಾತ್ರ. ಅದಕ್ಕಾಗಿ ಅವರು ಸಂಸತ್ತಿನಲ್ಲಿ ಇರಬೇಕು. ಇದ್ದು ಸಮಸ್ತ ಕನ್ನಡಿಗರ ಧ್ವನಿಯಾಗಬೇಕು ಅದಕ್ಕಾಗಿ ರಾಜ್ಯಸಭೆ ಸ್ಥಾನ ಬಿಟ್ಟು ಕೊಡ್ತೀನಿ ಎಂದು ಕುಪೇಂದ್ರ ರೆಡ್ಡಿ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಗೌಡರ ಮುಂದಿಟ್ಟಿದ್ದರು. ರಾಜೀನಾಮೆ ನೀಡುವ ಸಲುವಾಗಿಯೇ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಭೇಟಿಗೆ ಸಮಯವನ್ನು ಪಡೆದಿದ್ದರಂತೆ ಕುಪ್ಪೇಂದ್ರ ರೆಡ್ಡಿ. ಆದರೆ ಗೌಡರು ಈ ಮನವಿಯನ್ನು ನಯವಾಗಿ ತಿರಸ್ಕಾರ ಮಾಡಿದ್ದಾರೆ.

ರಾಜೀನಾಮೆ ನೀಡ್ತೀನಿ ಎಂದಿದ್ದಕ್ಕೆ ನೋ ಎಂದಿರುವ ಗೌಡರು, ನಾನು ಹಿಂಬಾಗಿಲಿನಿಂದ ಸಂಸತ್ ಪ್ರವೇಶ ಮಾಡುವವನಲ್ಲ. ನಂದು ಅಂತ ಜಾಯಮಾನವಲ್ಲ ಎಂದು ಗೌಡರು ಕುಪ್ಪೇಂದ್ರ ರೆಡ್ಡಿಗೆ ಹೇಳಿದ್ದಾರಂತೆ. ಈ ವೇಳೆ ಸಚಿವ ಎಚ್.ಡಿ‌ ರೇವಣ್ಣ ಕೂಡ ಉಪಸ್ಥಿತರಿದ್ದರು.

Comments are closed.