ರಾಷ್ಟ್ರೀಯ

ಮುಸ್ಲಿಮ್ ದಂಪತಿಗೆ ಹುಟ್ಟಿದ ಮಗುವಿನ ಹೆಸರು ನರೇಂದ್ರ ಮೋದಿ

Pinterest LinkedIn Tumblr

ಉತ್ತರ ಪ್ರದೇಶ(ಮೇ 26): ಇಲ್ಲಿಯ ಮುಸ್ಲಿಮ್ ಕುಟುಂಬವೊಂದರ ಮಗುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನಿಡಲಾಗಿರುವ ಕುತೂಹಲಕಾರಿ ಸುದ್ದಿ ವರದಿಯಾಗಿದೆ. ಮೋದಿ ಅವರ ಮೇಲಿನ ಅಭಿಮಾನದಿಂದ ಗೋಂಡಾ ಜಿಲ್ಲೆಯ ಪರ್ಸಾಪುರ್ ಮಹರೋರ್ ಗ್ರಾಮದ ಮೈನಜ್ ಬೇಗಮ್ ಎಂಬ ಮಹಿಳೆ ತನ್ನ ಕೂಸಿಗೆ “ನರೇಂದ್ರ ದಾಮೋದರ್​ದಾಸ್ ಮೋದಿ” ಎಂದು ಹೆಸರಿಟ್ಟಿದ್ದಾರೆ. ತನ್ನ ಕುಟುಂಬದವರ ವಿರೋಧದ ನಡುವೆಯೂ ಈ ಮಹಿಳೆ ತನ್ನ ನಿರ್ಧಾರದಲ್ಲಿ ಅಚಲರಾಗಿದ್ದಾರೆ. ಪರಿಣಾಮವಾಗಿ, ಆಕೆಯ ಕುಟುಂಬವು ನರೇಂದ್ರ ಮೋದಿ ಹೆಸರನ್ನೇ ತಮ್ಮ ವಂಶದ ಕುಡಿಗೆ ನಾಮಕರಣ ಮಾಡಿ ಪಂಚಾಯಿತಿಯಲ್ಲಿ ನೊಂದಣಿ ಕೂಡ ಮಾಡಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೇ 23ರಂದು ಈ ಮಗು ಜನಿಸಿದೆ. ಮೋದಿ ಮತ್ತೊಮ್ಮೆ ಜಯಭೇರಿ ಭಾರಿಸಿದ ದಿನವೇ ಹುಟ್ಟಿದ ಈ ಮಗುವಿಗೆ ಅವರದ್ದೇ ಹೆಸರು ಇಡಲು ಮೈನಾಜ್ ಬೇಗಮ್ ನಿರ್ಧರಿಸಿದರು. ದುಬೈನಲ್ಲಿರುವ ಆಕೆಯ ಪತಿ ಮುಷ್ತಾಕ್ ಅಹ್ಮದ್ ಸೇರಿದಂತೆ ಹಲವು ಕುಟುಂಬದ ಹಿತೈಷಿಗಳು ಆಕೆಗೆ ನಿರ್ಧಾರ ಕೈಬಿಡುವಂತೆ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾದವೆನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕಾನೂನು ರದ್ದು ಮಾಡುತ್ತಿದ್ದಾರೆ. ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಶೌಚಾಲಯ ನಿರ್ಮಾಣಕ್ಕೆ ಹಣಸಹಾಯ ಇತ್ಯಾದಿ ಹಲವು ಕಲ್ಯಾಣ ಕಾರ್ಯಗಳನ್ನ ಮೋದಿ ಸರಕಾರ ಮಾಡುತ್ತಿದೆ ಎಂದು ಈ ಮೈನಾಜ್ ಬೇಗಮ್ ಹೇಳಿದ್ದಾರೆ.

Comments are closed.