ಕರ್ನಾಟಕ

ರಾಜ್ಯದಲ್ಲಿ ಜೂನ್ ಮೊದಲ ವಾರದಲ್ಲಿ ಬಿಜೆಪಿ ಸರ್ಕಾರ!

Pinterest LinkedIn Tumblr


ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಉಮೇಶ್ ಕತ್ತಿ, ಜೂನ್ ಮೊದಲ ವಾರದಲ್ಲಿ ಹೊಸ ಸರ್ಕಾರ ರಚನೆ ಮಾಡುತ್ತೇವೆಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ 105 ಶಾಸಕರಿದ್ದಾರೆ. ಆದ್ರೆ ಕಾಂಗ್ರೆಸ್ ಜೆಡಿಎಸ್‌ನವರು ಬಿಜೆಪಿಯನ್ನ ಹೊರಗಿಟ್ಟು ಸರ್ಕಾರ ರಚನೆ ಮಾಡಿದ್ದಾರೆ. ಆದ್ರೆ ದೋಸ್ತಿ ಸರ್ಕಾರ ಕಚ್ಚಾಟದಲ್ಲಿ ಮುಳುಗಿದೆ. ಪ್ರಧಾನಮಂತ್ರಿ ಮೋದಿ ಪ್ರಮಾಣ ವಚನ ಸ್ವೀಕಾರದ ಬಳಿಕ ಸರ್ಕಾರ ಬೀಳಲಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಬರಲಿದೆ . ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಜೊತೆಗೆ 6 ತಿಂಗಳ ಹಿಂದೆ 20 ಜನ ಶಾಸಕರು ಇದ್ದರು. ಚುನಾವಣೆ ಸಂದರ್ಭದಲ್ಲಿ ರಮೇಶ್ ಏಕಾಂಗಿ ಆಗಿದ್ದರು. ಈಗ ಅವರೊಂದಿಗೆ ಇರುವ ಮೂರ್ನಾಲ್ಕು ಶಾಸಕರು ಮತ್ತು ಹೊಸ ಶಾಸಕರು ಸೇರಿ ಹೊಸ ಸರ್ಕಾರ ರಚನೆ ಮಾಡ್ತೀವಿ. ನಾನು ಮಂತ್ರಿ ಆಗಲು ಸಿದ್ದ, ಬಿಜೆಪಿ ರಾಜ್ಯಾಧ್ಯಕ್ಷ ಆಗಲು ಸಿದ್ದ. ಹಾಗೂ ಮುಖ್ಯಮಂತ್ರಿ ಮಾಡಿದ್ರೆ ಸಿಎಂ ಆಗಲು ನಾನು ಸಿದ್ದ ಎಂದು ಕತ್ತಿ ಸಿಎಂ ಆಗುವ ಆಸೆಯನ್ನ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

Comments are closed.