ಹಾಸನ: ತುಮಕೂರು ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋತ ಕಾರಣ ಭವಾನಿ ರೇವಣ್ಣ ದೇವೇಗೌಡರ ಮುಂದೆ ಕಣ್ಣೀರಿಟ್ಟಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಪತಿ ರೇವಣ್ಣ ಜೊತೆ ಆಗಮಿಸಿದ್ದ ಭವಾನಿ ರೇವಣ್ಣ, ನಾವು ನಿರೀಕ್ಷೆ ಮಾಡಿದಂತೆ ಫಲಿತಾಂಶ ಬಂದಿದೆ. ತುಮಕೂರಿನಲ್ಲಿ ನಿಮ್ಮ ಸೋಲು ನಿರೀಕ್ಷಿಸಿರಲಿಲ್ಲ. ನಿಮ್ಮ ಸೋಲನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ಹಾಸನದಿಂದ ನೀವು ಸ್ಪರ್ಧಿಸಬೇಕು. ನಮ್ಮ ಮನವಿಯನ್ನ ಒಪ್ಪಿ ಸ್ಪರ್ಧಿಸಿ ಎಂದು ಕಣ್ಣೀರಿಟ್ಟಿದ್ದಾರೆ.
ಅಲ್ಲದೇ, ಸಂಸದ ಸ್ಥಾನಕ್ಕೆ ಪ್ರಜ್ವಲ್ ರಾಜೀನಾಮೆ ಕೊಡುತ್ತಾರೆ. ಹಾಸನದಲ್ಲಿ ನೀವೇ ಸ್ಪರ್ಧಿಸಿ, ಯಾವುದೇ ಕಾರಣಕ್ಕೂ ಇಲ್ಲ ಎನ್ನಬೇಡಿ ಎಂದು ಭವಾನಿ ಅಳುತ್ತಲೇ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕೀಯದಲ್ಲಿ ಸೋಲುಗೆಲುವು ಸಹಜ, ಇದಕ್ಕೆಲ್ಲ ಎದೆಗುಂದಬಾರದು ಎಂದು ಸಮಾಧಾನ ಹೇಳಿದ್ದಾರೆ.