ಕರ್ನಾಟಕ

ದೇವೇಗೌಡ ಸೋಲಿಗೆ 5 ಕಾರಣಗಳು

Pinterest LinkedIn Tumblr


ಬೆಂಗಳೂರು: ತುಮಕೂರಿನಲ್ಲಿ ದೇವೇಗೌಡರು ಸೋಲು ಕಮಡಿದ್ದಾರೆ. ಹಾಗಾದರೆ ಅವರ ಸೋಲಿಗೆ ಪ್ರಮುಖ ಕಾರಣಗಳು ಏನು? ಬಿಜೆಪಿಯ ಕಾರ್ಯತಂತ್ರವ ಅಥವಾ ಇವರಲ್ಲಿನ ಹೊಂದಾಣಿಕೆ ಕೊರತೆಯೋ? ಅದಕ್ಕೊಂದು ವಿಶ್ಲೇಷಣೆ ಇಲ್ಲಿದೆ.

ದೇವೇಗೌಡರ ಸೋಲಿಗೆ ಪ್ರಮುಖ 5 ಕಾರಣಗಳು

1. ಹೇಮಾವತಿ ಅಡ್ಡಿ: ನೀರಿನ ಸಮಸ್ಯೆ ಎದುರಿಸುವ ತುಮಕೂರಿಗೆ ಹಿಂದೊಮ್ಮೆ ಹೇಮಾತಿ ನೀರು ನೀಡಲು ದೇವೇಗೌಡರು ತಕರಾರು ಮಾಡಿದ್ದರು ಎಂಬ ಮಾತಿದೆ. ಇದನ್ನೇ ಬಿಜೆಪಿಯವರು ತಮ್ಮ ಪ್ರಚಾರದ ಸಂದರ್ಭದಲ್ಲಿ ಪ್ರಭಾವಶಾಲಿಯಾಗಿ ಬಳಸಿದರು.

2. ಮುದ್ದಹನುಮೇಗೌಡರಿಗೆ ತಪ್ಪಿದ ಟಿಕೆಟ್: ಕಾಂಗ್ರೆಸ್ ಉಳಿದ ಎಲ್ಲ ಕಡೆ ಹಿಂದೆ ಗೆದ್ದು ಬಂದ ಎಂಪಿಗಳಿಗೆ ಟಿಕೆಟ್ ನೀಡಿತ್ತು. ಆದರೆ ದೋಸ್ತಿ ಹಂಚಿಕೆ ವೇಳೆ ತುಮಕೂರನ್ನು ಜೆಡಿಎಸ್ ಪಡೆದುಕೊಂಡಿತು. ಸಹಜವಾಗಿಯೇ ಮುದ್ದಹನುಮೇಗೌಡರ ಬೆಂಬಲಿಗರಲ್ಲಿ ಅಸಮಾಧಾನ ಕಾಣಿಸಿಕೊಂಡಿತು.

3. ಕೊನೆ ಕ್ಷಣದಲ್ಲಿ ಕ್ಷೇತ್ರ ಆಯ್ಕೆ: ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಬೇಕೋ? ಮೈಸೂರಿನಿಂದ ಅಖಾಡಕ್ಕೆ ಇಳಿಯಬೇಕೋ ಎಂಬುದೆ ಪಕ್ಕಾ ಆಗಲಿಲ್ಲ. ಕೊನೆ ಕ್ಷಣದಲ್ಲಿ ಗೌಡರು ತುಮಕೂರನ್ನು ಆಯ್ಕೆ ಮಾಡಿಕೊಂಡಿದ್ದರು. ಪ್ರಚಾರ ಸೇರಿದಂತೆ ಬಿಜೆಪಿಗೆ ಪ್ರತಿಯಾಗಿ ರಣತಂತ್ರ ರೂಪಿಸಲು ಸಮಯ ತುಂಬಾ ಕಡಿಮೆ ಇತ್ತು.

4. ಕಾಂಗ್ರೆಸ್ ನಾಯಕರಿಂದ ಸಿಗದ ಬೆಂಬಲ: ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯ ಮಟ್ಟದಲ್ಲಿ ದೋಸ್ತಿ ಮಾಡಿಕೊಂಡಿದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರು ಕೊನೆ ವರೆಗೂ ಬೇರೆಯಲೆ ಇಲ್ಲ. ರಾಜಣ್ಣ ಮತ್ತು ಮುದ್ದಹನುಮೇಗೌಡರ ಬೆಂಬಲಿಗರು ದೇವೇಗೌಡರ ಪರವಾಗಿ ನಿಲ್ಲಲೇ ಇಲ್ಲ.

5. ವರ್ಕ್ ಆಗದ ದೋಸ್ತಿ ನಾಯಕರ ಪ್ರಚಾರ: ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಪರವಾಗಿ ಪ್ರಚಾರ ಮಾಡಿದರೂ ಬಿಜೆಪಿ ತನ್ನ ಕಾರ್ಯತಂತ್ರಗಳನ್ನು ಸರಿಯಾಗಿಯೇ ಬಳಸಿತು.

Comments are closed.