ಕರ್ನಾಟಕ

ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ರಹಸ್ಯ ಮೀಟಿಂಗ್..?!

Pinterest LinkedIn Tumblr


ರಮೇಶ್ ಜಾರಕಿಹೊಳಿ ಬಿಜೆಪಿ ಹೈ ಕಮಾಂಡ್ ಜೊತೆ ಮಹತ್ವದ ಚರ್ಚೆಗೆ ತಯಾರಿ ನಡೆದಿದ್ದು ಇಂದು ಬೆಳಗ್ಗೆ ದೆಹಲಿಯಲ್ಲಿ ರಹಸ್ಯ ಮಾತುಕತೆ ನಡೆಯಲಿದೆ ಎಂದು ಹೇಳಲಾಗ್ತಿದೆ.

ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಾಗಿನಿಂದಲೂ ಸಾಹುಕಾರ್ ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಅಂತ ಹೇಳಲಾಗ್ತಿದೆ.

ನಾಲ್ಕರಿಂದ ಐದು ಶಾಸಕರನ್ನ ಕರೆತರೋದು ನನ್ನ ಜವಾಬ್ದಾರಿ ಅಂತ ರಮೇಶ್ ಜಾರಕಿಹೊಳಿ, ಬಿಎಸ್ ಯಡಿಯೂರಪ್ಪ ಅವ್ರಿಗೆ ಮಾತು ಕೊಟ್ಟಿದ್ದಾರಂತೆ.. ಉಳಿದ ಶಾಸಕರನ್ನ ಸೆಳೆಯೋದು ನಿಮಗೆ ಬಿಟ್ಟಿದ್ದು ಅಂತ ತಿಳಿಸಿದ್ದಾರಂತೆ. ಅಲ್ದೇ ತಮ್ಮ ಬೆಂಬಲಿಗ ಶಾಸಕರಿಗೆ ಯಾರು ಏನೇ ಭರವಸೆ ನಿಂತರು ಕಿವಿಕೊಡಬೇಡಿ ಎಂದು ಸೂಚಿಸಿದ್ದಾರಂತೆ.

Comments are closed.