ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಾಲಿಗೆ ಕರ್ನಾಟಕವೇ ಭದ್ರಕೋಟೆ. ಇಲ್ಲಿಯೂ ಅಧಿಕಾರ ಕೈ ತಪ್ಪಿದರೆ ಕೈ ಪಡೆ ಕಂಗಾಲಾಗೋದ್ರಲ್ಲಿ ನೋ ಡೌಟ್ ಹೀಗಾಗಿಯೇ ಹೇಗಾದರು ಮಾಡಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇ ಬೇಕು ಅಂತಾ ಕೇಂದ್ರ ನಾಯಕರು ರಾಜ್ಯದ ಮೇಲೆ ಕಣ್ಣಿಟ್ಟಿದ್ದಾರೆ.
ರಾಜ್ಯ ಉಸ್ತುವಾರಿ ವೇಣುಗೋಪಾಲ್ಗೆ ಸೂಚನೆ ನೀಡಿರೋ ರಾಹುಲ್ ಗಾಂಧಿ ಶತಾಯಗತಾಯ ಮೈತ್ರಿ ಗಟ್ಟಿಗೊಳಿಸುವಂತೆ ತಾಕೀತು ಮಾಡಿದ್ದಾರಂತೆ. ಹೀಗಾಗಿ ಸಚಿವ ಡಿ. ಕೆ ಶಿವಕುಮಾರ್ಗೆ ಫೋನ್ ಮಾಡಿರೋ ವೇಣುಗೋಪಾಲ್ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ರಾಜ್ಯಕ್ಕೆ ವಾಪಸ್ ಆಗುವಂತೆ ಹೇಳಿದ್ದಾರಂತೆ. ಅಲ್ಲದೇ, ಕಾಂಗ್ರೆಸ್ನ ಎಲ್ಲಾ ಶಾಸಕರನ್ನು ಗುಡ್ಡೆ ಹಾಕುವಂತೆ ಸೂಚಿಸಿದ್ದಾರೆ.
ಬಂಡಾಯ ಶಾಸಕರ ನಡೆ ದಳಪತಿಗಳಿಗೂ ತಳಮಳ ಸೃಷ್ಟಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿಯನ್ನ ಕಟ್ಟಿಹಾಕೋದೇಗೆ. ಆಪರೇಷನ್ ಕಮಲಕ್ಕೆ ಕೌಂಟರ್ ಕೊಡೋದೇಗೆ ಅಂತಾ ಡಿಸಿಎಂ ಪರಮೇಶ್ವರ್, ಎಂಟಿಬಿ ನಾಗರಾಜ್, ಕೃಷ್ಣಭೈರೇಗೌಡ ಸೇರಿದಂತೆ ಹಲವು ನಾಯಕರು ಚಕ್ರವ್ಯೂಹ ಸೃಷ್ಟಿಸ್ತಿದ್ದಾರೆ.
ಫಲಿತಾಂಶದ ನಂತರ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡೋಕೆ ಶುರು ಮಾಡ್ತಿದ್ದಂತೆ ಕೈ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಏಟಿಗೆ ಏಟು. ಕುಸ್ತಿಗೆ ಕುಸ್ತಿ ಅಂತಾ ತಿರುಗಿ ಬಿದ್ದಿದ್ದಾರೆ. ಫಲಿತಾಂಶದ ನಂತರ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ. ಒಂದು ವೇಳೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ ನಾವೂ ಮಾಡ್ತೀವಿ ಅಂತಾ ಟಾಂಗ್ ಕೊಟ್ಟಿದ್ದಾರೆ.
Comments are closed.