ಕರ್ನಾಟಕ

ರಾಜಕೀಯ ದ್ವೇಷ ಹಿನ್ನೆಲೆ: ಬಿಜೆಪಿ ಮುಖಂಡರ ಮಧ್ಯೆ ಗಲಾಟೆ – ಆಸ್ಪತ್ರೆಗೆ ದಾಖಲು

Pinterest LinkedIn Tumblr


ಬಾಗಲಕೋಟೆ: ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಜಮಖಂಡಿಯ ಇಬ್ಬರು ಬಿಜೆಪಿ ಮುಖಂಡರ ನಡುವೆ ಗಲಾಟೆ ನಡೆದಿದೆ.

ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶ್ರೀಧರ್ ಕನ್ನೂರ ಹಾಗೂ ಮಾಜಿ ನಗರಸಭೆ ಸದಸ್ಯ ನರಸಿಂಹ ನಾಯಕ್ ಮಧ್ಯೆ ಗಲಾಟೆಯಾಗಿದ್ದು ನಿನ್ನೆ ತಡರಾತ್ರಿ ಖಾಸಗೀ ಹೋಟೆಲ್​ವೊಂದರಲ್ಲಿ ಮಾತಿಗೆ ಮಾತು ಬೆಳೆದು ಜಮಖಂಡಿಯ ಎರಡು ಕಮಲ ಪಡೆಯ ಮುಖಂಡರು ಕೈ ಮಿಲಾಯಿಸಿದ್ದಾರೆ.

ಶ್ರೀಧರ್ ಕನ್ನೂರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಪ್ತರಾಗಿದ್ದಾರೆ. ನರಸಿಂಹ ನಾಯಕ್, ಸಂಗಮೇಶ್ ನಿರಾಣಿ ಬಣದಲ್ಲಿ ಗುರುತಿಸಿಕೊಂಡಿರೋ ಮುಖಂಡರಾಗಿದ್ದಾರೆ.

ರಾಜಕೀಯ ಹಳೆದ್ವೇಷದ ಹಿನ್ನೆಲೆ ಗಲಾಟೆ ನಡೆದಿದ್ದು ಶ್ರೀಧರ್ ಕನ್ನೂರ ಅವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನರಸಿಂಹ ನಾಯಕ್ ಹಾಗೂ ಉಮೇಶ್ ಆಲಮೇಲಕರ್ ಅವರನ್ನು ಜಮಖಂಡಿಯ ಕೆಎಲ್ ಈ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.