ಕರ್ನಾಟಕ

ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸಿದ್ದತೆ?

Pinterest LinkedIn Tumblr


ಬಿಜೆಪಿಯಲ್ಲಿ ಮತ್ತೆ ಬಿ.ಎಲ್ ಸಂತೋಷ್ ಭಿನ್ನಮತೀಯ ಚಟುವಟಿಕೆ ಮಾಡ್ತಿದ್ದಾರೆಂಬ ಚರ್ಚೆ ಆರಂಭವಾಗಿದೆ. ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ .ಇದರಿಂದ ಮೈತ್ರಿ ರಾಜ್ಯ ಸರ್ಕಾರದ ಮೇಲೂ ಪರಿಣಾಮ ಸಾಧ್ಯತೆ ಇದೆ.

ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದರೆ ಬಿಜೆಪಿ ಸರ್ಕಾರ ನಿಶ್ಚಿತ. ಆಗ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಹೀಗಾಗಿ ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ಬಿ.ಎಲ್ ಸಂತೋಷ್ ರೆಡಿಯಾಗ್ತಿದ್ದಾರೆ ಎಂಬ ಚರ್ಚೆ ನಡೆದಿದೆ.

40 ಪ್ರಮುಖ ನಾಯಕರ ಜೊತೆ ಬಿ.ಎಲ್ ಸಂತೋಷ್ ಅಂಡಮಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಎಲ್. ಸಂತೋಷ್ ಟೀಂ ಉತ್ತರ ಪ್ರದೇಶದ ಗೋರಕಪುರಕ್ಕೆ ಹೋಗಿತ್ತು. ಹೈಕಮಾಂಡ್ ಆದೇಶದಂತೆ ಉತ್ತರ ಪ್ರದೇಶ ಲೋಕಸಭಾ ಚುನಾವಣೆ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಬಿಜೆಪಿ ಪ್ರಮುಖ ನಾಯಕ ಸಿ.ಟಿ.ರವಿ ಚುನಾವಣಾ ನಿಮಿತ್ತ ವಾರಣಾಸಿಯಲ್ಲಿದ್ದರು. ಆದರೀಗ ಸಿ.ಟಿ ರವಿ ಕೂಡಾ ಸಂತೋಷ್ ಜೊತೆ ಅಂಡಮಾನ್‌ನಲ್ಲಿದ್ದಾರೆ.

ಇನ್ನು ಬಿ.ಎಲ್ ಸಂತೋಷ್ ಅಂಡಮಾನ್ ನಲ್ಲಿರೋದು ನಿಜ ಅಂತ ಸ್ವತಃ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಬಹಿರಂಗವಾಗೇ ಒಪ್ಪಿಕೊಂಡರು. ಬಿ.ಎಲ್ ಸಂತೋಷ್ ಪಕ್ಷದ ಬೈಟಕ್ ನಡೆಸಲು ತೆರಳಿದ್ದಾರೆಯೇ ಹೊರತು ಬೇರೆ ಕಾರಣಕ್ಕಲ್ಲ ಎಂದರು.

ಸದ್ಯ ಬಿ.ಎಲ್ ಸಂತೋಷ್ ಅವರಿಗೆ ಮುಂದೆ ಸಿಎಂ ಆಗಬೇಕೆಂಬ ಆಸೆ ಇದೆ. ಅದಕ್ಕೆ ಯಡಿಯೂರಪ್ಪ ಹಾದಿಗೆ ಅವರು ಅಡ್ಡಬರ್ತಿದ್ದಾರೆ ಅಂತ ಯಡಿಯೂರಪ್ಪ ಆಪ್ತ ನಾಯಕರು ಹೇಳ್ತಿದ್ದಾರೆ. ಸದ್ಯ ಬಿಜೆಪಿ ಪಾಲಿನ ಒಂಟಿ ಸಲಗ ಯಡಿಯೂರಪ್ಪ . ಬಿ.ಎಸ್.ವೈ ಕಟ್ಟಿ ಹಾಕೋದು ಅಷ್ಟು ಸುಲಭವೂ ಇಲ್ಲ . ಆದರೆ ಬಿ.ಎಲ್ ಸಂತೋಷ್ ತಮ್ಮ ಹಳೆ ವರಸೆ ಮುಂದುವರೆಸಿದ್ದಾರೆ ಅಂತಿದ್ದಾರೆ ಯಡಿಯೂರಪ್ಪ ಆಪ್ತ ಬಣದ ನಾಯಕರು.

Comments are closed.