ಕರ್ನಾಟಕ

ಮೈತ್ರಿ ಸರ್ಕಾರ ಪತನ: ಕೊನೆಗೂ ಮೌನ ಮುರಿದ ದೇವೇಗೌಡ

Pinterest LinkedIn Tumblr

ಬೆಂಗಳೂರು: ಪದ್ಮನಾಭನಗರ ನಿವಾಸದಲ್ಲಿಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಮಾನಿಗಳು ಮತ್ತು ಕುಟುಂಬದ ಜೊತೆ 87ನೇ ಜನ್ಮ ದಿನಾಚರಣೆ ಆಚರಿಸಿದ್ದಾರೆ.

ಈ ವೇಳೆ ಮಾತನಾಡಿದ ದೇವೇಗೌಡರು, ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಮೇ 18 ನಾನು ಹುಟ್ಟಿದ ದಿನಾಂಕ. 40 ವರ್ಷಗಳಿಂದ ವೆಂಕಟೇಶ್ವರನ ಪೂಜೆ ಮಾಡಿಕೊಂಡು ಬಂದಿದ್ದೀನಿ. ಇವತ್ತು ಬೆಳಗ್ಗೆ ತಿರುಪತಿಯಿಂದ ವಾಪಸ್ ಬಂದ್ವಿ. ಗುರುಪೂರ್ಣಿಮೆ ಮತ್ತು ನಮ್ನ ಜನ್ಮದಿನ ಕಾಕತಾಳೀಯ ಅಷ್ಟೇ. ಕೇಕ್ ತಂದಿದ್ರು, ಕಟ್ ಮಾಡಿ ಜನ್ಮದಿನ ಆಚರಿಸಿಕೊಂಡಿದೀನಿ. ಹುಟ್ಟುಹಬ್ಬದ ಶುಭಾಷಯ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇನ್ನು ಕೆಲವರು ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ದೇವೇಗೌಡರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ರಾಜ್ಯದಲ್ಲಿ ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು ಅಂತ ಲಿಖಿತವಾಗಿಯೇ ಬರೆದುಕೊಟ್ಟಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮೊದಲಿಂದಲೂ ಗೊಂದಲ ಇದ್ದಿದ್ದೇ. ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ಗೊಂದಲ ಇದೆ. ಯಾರ್ಯಾರು ಏನ್ ಮಾತಾಡಿದ್ರು ಅಂತ ಹೇಳೊಕ್ಕೆ ಹೋಗಲ್ಲ. ಆದ್ರೆ ಮೈತ್ರಿ ಸರ್ಕಾರ ಉಳಿಯುತ್ತೆ. ಐದು ವರ್ಷ ಅಧಿಕಾರ ನಡೆಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.