ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಯಾರು ಕೇಂದ್ರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದೇ ಇಡೀ ದೇಶಕ್ಕಿರುವ ಕುತೂಹಲ. ಅದರಲ್ಲೂ ಮೋದಿ-ರಾಹುಲ್ ನಡುವೆ ಬಾಜಿ ಕಟ್ಟುವವರ ಸಂಖ್ಯಗೇನೂ ಕೊರತೆಯಿಲ್ಲ.
ಈ ಮಧ್ಯೆ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದರ ಕುರಿತು ದೇಶದ ಪ್ರಸಿದ್ಧ ಜ್ಯೋತಿಷಿ ಬೇಜಾನ್ ದಾರುವಾಲಾ ಭವಿಷ್ಯ ನುಡಿದಿದ್ದು, ಪ್ರಧಾನಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಹುಲಿಯ ಗುಣಗಳಿದ್ದು, ಅವರು ಮತ್ತೆ ಈ ದೇಶದ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಬೇಜಾನ್ ದಾರುವಾಲಾ ಹೇಳಿದ್ದಾರೆ. ಮೋದಿ ಅತ್ಯಂತ ಕುಶಾಗ್ರಮತಿ ಎಂದು ಕರೆದಿರುವ ಅವರು, ತುರ್ತು ನಿರ್ಣಯಗಳನ್ನು ಕೈಗೊಳ್ಳಲು ಸಮರ್ಥರು ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಹೊಗಳಿರುವ ಬೇಜಾನ್ ದಾರುವಾಲಾ, ರಾಹುಲ್ ಗಾಂಧಿ ಅವರಲ್ಲಿ ನಾಯಿಯ ಗುಣಗಳಿವೆ. ಅವರೊಬ್ಬ ಉತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.
ಆದರೆ ಹುಲಿ ಯಾವಾಗಲೂ ನಾಯಿಗಿಂತ ಬಲಿಷ್ಠವಾಗಿದ್ದು ಹೀಗಾಗಿ ಈ ಬಾರಿಯೂ ಮೋದಿ ಅವರೇ ಪ್ರಧಾನಿ ಕುರ್ಚಿಯನ್ನು ಅಲಂಕರಿಸಲಿದ್ದಾರೆ ಎಂದು ಬೇಜಾನ್ ದಾರುವಾಲಾ ಭವಿಷ್ಯ ನುಡಿದಿದ್ದಾರೆ.