ಕರ್ನಾಟಕ

ತುಮಕೂರಿನಲ್ಲಿ ಪೊಲೀಸರ ಸೋಗಿನಲ್ಲಿ ಬಂದು ದೋಚುವ ಆಂಧ್ರದ ಕದ್ರಿ ಗ್ಯಾಂಗ್!

Pinterest LinkedIn Tumblr


ತುಮಕೂರು: ಜನಸಾಮಾನ್ಯರು ತೊಂದರೆ ಸಿಲುಕಿದಾಗ ರಕ್ಷಣೆಗೆ ಪೊಲೀಸರು ಬರುತ್ತಾರೆ. ಆದ್ರೆ ಪೊಲೀಸರ ಹೆಸರಿನಲ್ಲೇ ಚಿನ್ನಾಭರಣ ದೋಚುವ ಗ್ಯಾಂಗ್​ವೊಂದು ಕಲ್ಪತರು ನಾಡಿನಲ್ಲಿ ಸಕ್ರಿಯವಾಗಿದೆ. ಅಮಾಯಕ ಮುಗ್ಧ ಮಹಿಳೆಯರನ್ನ ವಂಚಿಸಿ ದೋಚುತ್ತಿರುವ ಆಂಧ್ರ ಮೂಲದ ಕದರಿಯ ಆ ಗ್ಯಾಂಗ್ ಹಿಡಿಯೋಕೆ ಆಂಧ್ರ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಚರಣೆಗೆ ಇಳಿದಿದ್ದಾರೆ.

ಮೊನ್ನೆ ದಿನ ಪಾವಗಡ ಪಟ್ಟಣದ ವಿನಾಯಕ ಬಡಾವಣೆಯ ವಿಜಯಮ್ಮ ಎನ್ನುವವರು ಆಸ್ಪತ್ರೆಯಿಂದ ಮನೆ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು, ನಾವು ಪೋಲಿಸರು ಎಂದು ಹೇಳಿ ನಂಬಿಸಿದ್ದಾರೆ. ಮಾಂಗಲ್ಯ ಸರವನ್ನ ನೀವು ಈ ರೀತಿ ಕೋರಳಲ್ಲಿ ಹಾಕಿಕೊಂಡು ತೆರಳಿದರೆ ಕದೀತಾರೆ. ಒಂದು ಕವರ್​ಗೆ ಹಾಕಿ ಕೋಡ್ತೀವಿ ಎಂದು ನಂಬಿಸಿ ಕವರ್‍ನಲ್ಲಿ ಇಟ್ಟು ಕೊಡುವ ನಾಟಕ ಆಡಿದ್ದಾರೆ. ಆನಂತರ ಆ ಮಹಿಳೆಯರು ತಮ್ಮ ಮನೆಗೆ ಹೋಗಿ ಕವರ್ ಬಿಚ್ಚಿ ನೋಡಿದಾಗ ಒಡವೆ ಬದಲು ಕಲ್ಲು ಇರುವುದು ಪತ್ತೆಯಾಗಿದೆ.

ಈ ಗ್ಯಾಂಗ್​ನವರು ಇದೇ ರೀತಿ ಪದೇ ಪದೇ ಪಾವಗಡದಲ್ಲಿ ಪೋಲಿಸರೆಂದು ನಂಬಿಸಿ ಮಹಿಳೆಯರ ಕೊರಳಲ್ಲಿದ್ದ ಚಿನ್ನದ ಸರವನ್ನ ಎಗರಿಸ್ತಾರೆ. ಇಂತಹ ನಕಲಿ ಪೊಲೀಸರ ವಿರುದ್ಧ ಕ್ರಮಕ್ಕೆ ಕೂಗು ಹೆಚ್ಚಾಗಿದೆ. ಇದ್ರಿಂದ ಎಚ್ಚೆತ್ತ ಪೊಲೀಸರು ಈ ಖತರ್ನಾಕ್ ಗ್ಯಾಂಗ್​ನ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ.

ಆಂಧ್ರದ ಅನಂತಪುರ ಜಿಲ್ಲೆಯ ಕದರಿ ಎಂಬ ಗ್ರಾಮದ ಈ ಗ್ಯಾಂಗ್​ನವರು ಪೊಲೀಸರ ಹೆಸರೇಳಿ ಸರಗಳ್ಳತನ ಮಾಡುತ್ತಿರುವುದು ಆಂಧ್ರದಲ್ಲೂ ಬೆಳಕಿಗೆ ಬಂದಿದೆ. ಇದೇ ಗ್ಯಾಂಗ್ ಪಕ್ಕದ ಪಾವಗಡಕ್ಕೂ ಬಂದಿದೆ ಅನ್ನೋದು ಪೊಲೀಸರ ಅನುಮಾನ.

ಮತ್ತೊಂದು ಕಡೆ ಮನೆ ಹಾಗೂ ದ್ವಿಚಕತ್ರ ವಾಹಗಳನ್ನ ಕಳವು ಮಾಡ್ತಾ ಇದ್ದ ಮೂವರು ಕಳ್ಳರನ್ನ ಕೊರಟಗೆರೆ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ. ನೆಲಮಂಗಲ, ಕೊರಟಗೆರೆ , ತುಮಕೂರು ಹಾಗೂ ಮಧುಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಕೃತ್ಯ ಎಸಗಿದ್ದ 9 ಪ್ರಕರಣವನ್ನ ಭೇದಿಸಿದ್ದಾರೆ. ತುರುವೇಕೆರೆಯ ವೆಂಕಟೇಶ್, ತುಮಕೂರಿನ ಭಾಗ್ಯನಗರದ ಗೋಪಾಲ್, ಕೋತಿ ತೋಪಿನ ಕೃಷ್ಣ ಪೊಲೀಸರಿಗೆ ಸಿಕ್ಕಿ ಬಿದ್ದ ಚೋರರು. ಬಂಧಿತರಿಂದ 1,62,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 1,80,000 ಮೌಲ್ಯದ 3 ದ್ವಿಚಕ್ರವಾಹನ , ಎಲ್ ಇಡಿ ಟಿವಿ ಹಾಗೂ 3 ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಎಷ್ಟೇ ಬಂದೋಬಸ್ತ್ ಮುನ್ನೆಚರಿಕೆ ವಹಿಸ್ತಾ ಇದ್ರು ಖತರ್ನಾಕ್ ಖದೀಮರು ಖಾಕಿಗೆ ಚೆಳ್ಳೆಹಣ್ಣು ತಿನ್ನಿಸಿ ಕಳ್ಳತನದಲ್ಲಿ ಮಗ್ನರಾಗಿದ್ದಾರೆ. ಸ್ಥಳೀಯ ಕಳ್ಳರಲ್ಲದೆ ಹೊರ ರಾಜ್ಯಗಳಿಂದ ಕಲ್ಪತರು ನಾಡಿಗೆ ಆಗಮಿಸ್ತಾ ಇದ್ದಾರೆ. ಪೊಲೀಸರು ವಿಶೇಷ ತಂಡ ಹಿಡಿಯುವ ಮುನ್ನ ಅದೆಷ್ಟು ಜನ ತಮ್ಮ ಚಿನ್ನಾಭರಣಗಳನ್ನ ಕಳೆದುಕೊಳ್ತಾರೋ ಅಂತಿದ್ದಾರೆ ಜನಸಾಮಾನ್ಯರು..!

Comments are closed.