ಕರ್ನಾಟಕ

ಶೋಭಾ ಕರಂದ್ಲಾಜೆಗೆ ಸೀರೆ, ಬಳೆ, ಪ್ಯಾಂಟ್, ಶರ್ಟ್ ಉಡುಗೊರೆ!

Pinterest LinkedIn Tumblr


ಚಿಕ್ಕಮಗಳೂರು: ನಿನ್ನೆ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ನಾಯಕರು ಕೆಲಸ ಮಾಡಲಾಗದಿದ್ದಲ್ಲಿ ಬಳೆ ತೊಟ್ಟುಕೊಳ್ಳಲಿ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಆಕ್ರೋಶಗೊಂಡ ಕಾಂಗ್ರೆಸ್‌ ಕಾರ್ಯಕರ್ತೆಯರು ಸಂಸದೆ ಶೋಭಾ ಕರಂದ್ಲಾಜೆಗೆ ಸೀರೆ, ಬಳೆ, ಪ್ಯಾಂಟ್, ಶರ್ಟ್ ಗಿಫ್ಟ್ ಮಾಡಿದ್ದಾರೆ.

ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತೆಯರು, ಶೋಭಾ ಕರಂದ್ಲಾಜೆ ಹೆಣ್ಣೋ-ಗಂಡೋ. ಅವರು ಏನೆಂಬುದು ಅವರೇ ತೀರ್ಮಾನಿಸಲಿ. ಹೆಣ್ಣಾದ್ರೆ ಸೀರೆ-ಬಳೆ ತೊಡಲಿ, ಗಂಡಾದ್ರೆ ಪ್ಯಾಂಟ್ ಶರ್ಟ್ ಹಾಕಲಿ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಶೋಭಾ ಹೇಳಿಕೆ ಸ್ತ್ರೀಕುಲಕ್ಕೆ ಮಾಡಿದ ಅವಮಾನ,ಅವರು ತಾನು ಹೆಣ್ಣೆಂಬುದನ್ನೇ ಮರೆತಿದ್ದಾರೆಂದು ಕೆಂಡಾಮಂಡಲಾಗಿದ್ದು, ಕೂಡಲೇ ಸಿದ್ದರಾಮಯ್ಯರ ಬಳಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

Comments are closed.