
ಕುಂದಗೋಳ: ಹುಬ್ಬಳ್ಳಿಯ ಕುಂದಗೋಳ ಕ್ಷೇತ್ರದಲ್ಲಿ ಭರ್ಜರಿ ಮತಪ್ರಚಾರ ನಡೀತಿದೆ. ಕುಸುಮಾ ಶಿವಳ್ಳಿ ಪರ ಮತ ಕೇಳೋಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರ ದಂಡೇ ಕುಂದಗೋಳಕ್ಕೆ ಪಯಣ ಬೆಳೆಸಿದೆ. ಆದ್ರೆ ಅಲ್ಲಿನ ಜನ ರಾಜಕೀಯ ಮುಖಂಡರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಶಿವಳ್ಳಿ ಸತ್ತಾಗ ಯಾರೂ ಬರಲಿಲ್ಲ. ಸರ್ಕಾರ ಹೋಗುತ್ತೆ ಅನ್ನೋ ಕಾರಣಕ್ಕೆ ಎಲ್ಲರೂ ಬಂದಿದ್ದಾರೆ. ನಾವು ವೋಟ್ ಹಾಕುವ ಮೂಲಕ ನಮ್ಮ ಕರ್ತವ್ಯ ಮಾಡುತ್ತೇವೆ. ಆದ್ರೆ ಈ ಪ್ರಚಾರಕ್ಕಿಂತ ಮುನ್ನ ರಾಜಕೀಯ ನಾಯಕರಿಗೆ ಕುಂದಗೋಳ ಕ್ಷೇತ್ರ ಹೇಗಿದೆ ಎಂದು ಗೊತ್ತಿರಲಿಲ್ಲ. ಇದೀಗ ಕುಂದಗೋಳಕ್ಕೆ ಹೇಗೆ ಓಡಿ ಬರ್ತಿದ್ದಾರೆ ನೋಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರೆಲ್ಲ ಕುಂದಗೋಳದ ಸಮಸ್ಯೆ ನೋಡಲು ಬಂದಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಂದಿದ್ದಾರೆ. ಚುನಾವಣೆ ಮುಗಿದು ರಿಸಲ್ಟ್ ಬರುವವರೆಗೂ ಯಾವ ರಾಜಕಾರಣಿಯೂ ವಿಧಾನಸೌಧದತ್ತ ಮುಖ ಮಾಡುವುದಿಲ್ಲ. ಜನರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಎಲ್ಲ ತಮ್ಮ ತಮ್ಮ ಕುರ್ಚಿ ಗಟ್ಟಿಮಾಡಿಕೊಳ್ಳುವವರು ಎಂದು ವಾಗ್ದಾಳಿ ನಡೆಸಿದ್ದಾರೆ.
Comments are closed.