ಕರ್ನಾಟಕ

ಅಂಬಾ ವಿಲಾಸ್ ಪ್ಯಾಲೇಸ್ ನ ಉದ್ದಿನವಡೆಯಲ್ಲಿ ಬಾಂಬ್ ಇದೆ ಎಂದು ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ !

Pinterest LinkedIn Tumblr

ಮೈಸೂರು: ಮನೆಯಲ್ಲಿ ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಬಾರಿನಲ್ಲಿ ಪೆಗ್ಗಿನ ಮೇಲೆ ಪೆಗ್ಗು ಏರಿಸಿ ಪೊಲೀಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ರಂಪಾಟ ಮಾಡಿದ್ದಾನೆ.

ಬೆಳಗ್ಗೆ 9.30 ರ ಸಮಯದೊಳಗೆ ಮೂರು ಬಾರಿ ಫೋನ್ ಮಾಡಿ, ಅಂಬಾ ವಿಲಾಸ್ ಪ್ಯಾಲೇಸ್ ನ ಉದ್ದಿನವಡೆಯಲ್ಲಿ ಬಾಂಬ್ ಇದ್ದು ಶೀಘ್ರವ್ ಬ್ಲಾಸ್ಟ್ ಆಗಲಿದೆ ಎಂದು ಹೇಳಿದ್ದಾನೆ. ಇದಾದ ನಂತರ ಒಂದು ಗಂಟೆ ಪರೀಕ್ಷಿಸಲಾಗಿದೆ, ನಂತರ ತಿಳಿದಿದೆ, ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ.

ಬೆಳವಾಡಿಯ ಮೆಕ್ಯಾನಿಕ್ ಆಗಿರುವ ಗಂಗಾಧರ್ ಎಂದು ಗುರುತಿಸಲಾಗಿದೆ, ಮದ್ಯವ್ಯಸನಿಯಾಗಿರುವ ಗಂಗಾಧರ್ ತನ್ನ ಮನೆಯಿಂದಲೇ ಪಾತ್ರೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದ, ನಂತರ ಆ ಹಣವನ್ನು ಕುಡಿಯಲು ಬಳಸುತ್ತಿದ್ದ. ಈ ವಿಷಯವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು.

ಕೋಪಗೊಂಡ ಗಂಗಾಧರ್ ಮೈಸೂರಿಗೆ ಆಗಮಿಸಿ ಕಂಠಪೂರ್ತಿ ಕುಡಿದಿದ್ದಾನೆ, ಆ ವೇಳೆ ಪದೇ ಪದೇ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ ಗಂಗಾಧರ್, ತನ್ನ ಮೊಬೈಲ್ ನಿಂದ ಕರೆ ಮಾಡಿದ್ದಾನೆ, ಜೊತೆಗೆ ಬಾರ್ ಕೌಂಟರ್ ನಲ್ಲಿದ್ದ ದೂರವಾಣಿಯಿಂದಲೂ ಕರೆ ಮಾಡಿದ್ದಾನೆ.

ಕೂಡಲೇ ಬಾಂಬ್ ಸ್ಕ್ವಾಡ್ ಗೆ ವಿಷಯ ಮುಟ್ಟಿಸಿದ ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನಂತರ ಫೋನ್ ನಂಬರ್ ಟ್ರೇಸ್ ಮಾಡಿದ ಮಾಡಿದ ಪೊಲೀಸರು ದೂರವಾಣಿ ಕರೆ ಬಾರ್ ಸಮೀಪದಿಂದ ಬಂದಿದೆ ಎಂದು ತಿಳಿದು ಬಂದಿದೆ, ಬಾರ್ ನಲ್ಲಿ ಕುಡಿಯುತ್ತಿದ್ದ ಗಂಗಾಧರ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ, ವಿಚಾರಣೆ ವೇಳೆ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

Comments are closed.