ರಾಷ್ಟ್ರೀಯ

ಕಾಂಗ್ರೆಸ್ ಗೆ ಮತ ಹಾಕಿದ ಎಂಬ ಕಾರಣಕ್ಕೆ ಸಹೋದರನನ್ನೇ ಗುಂಡಿಕ್ಕಿ ಕೊಂದ ವ್ಯಕ್ತಿ

Pinterest LinkedIn Tumblr

ಚಂಡೀಘಡ್: ಲೋಕಸಭಾ ಚುನಾವಣೆ ನಿಮಿತ್ತ ಇತ್ತೀಚಿಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾನೆ ಎಂಬ ಒಂದೇ ಕಾರಣಕ್ಕೆ ಸ್ವಂತ ಸಹೋದರನೇ ತನ್ನ ಸಹೋದರನಿಗೆ ಗುಂಡಿಕ್ಕಿ ಕೊಲ್ಲಲು ಯತ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರ್ಯಾಣದ ಝಜ್ಜರ್ ನಲ್ಲಿ ಈ ಘಟನೆ ನಡೆದಿದ್ದು, ಇದೇ ಮೇ 12ರಂದು ನಡೆದಿದ್ದ ಆರನೇ ಹಂತದ ಮತದಾನದ ವೇಳೆ ಹರ್ಯಾಣದ ಝಜ್ಜರ್ ನಲ್ಲಿ ಮತದಾನವಾಗಿತ್ತು. ಈ ವೇಳೆ ಸ್ಥಳೀಯ ಬಿಜೆಪಿ ಕಾರ್ಯಕರ್ತ ಧರ್ಮೇಂದ್ರ ಎಂಬಾತ ತನ್ನ ಸಹೋದರ ಸಂಬಂಧಿ ರಾಜಾ ಎನ್ನುವವನಿಗೆ ಗುಂಡು ಹಾರಿಸಿದ್ದಾನೆ. ಅಲ್ಲದೇ ಈ ವೇಳೆ ಇದನ್ನು ತಡೆಯಲು ಬಂದ ತಾಯಿಗೂ ಗುಂಡು ತಗುಲಿದೆ. ಇಬ್ಬರನ್ನೂ ಸಮೀಪದ ಪಿಜಿಐ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಸ್ತುತ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇ 12ರಂದು ನಡೆದಿದ್ದ ಆರನೇ ಹಂತದ ಮತದಾನದ ವೇಳೆ ಹರ್ಯಾಣದ ಝಜ್ಜರ್ ನಲ್ಲಿ ಮತದಾನವಾಗಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತನಾಗಿದ್ದ ಧರ್ಮೇಂದ್ರ ತನ್ನ ಕುಟುಂಬಸ್ಥರಿಗೆ ಬಿಜೆಪಿ ಮತ ಹಾಕುವಂತೆ ಸೂಚಿಸಿದ್ದ, ಆದರೆ ಆತನ ಸಹೋದರ ಇದಕ್ಕೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಮಾತನಿ ಚಕಮಕಿ ಏರ್ಪಟ್ಟಿತ್ತು, ಮತದಾನದ ಬಳಿಕ ಮತ್ತೆ ಇದೇ ವಿಚಾರವಾಗಿ ಸಹೋದರರ ನಡುವೆ ಮತ್ತೆ ಮಾತಿನ ಚಕಮಕಿ ಏರ್ಪಟ್ಟಿತ್ತು, ಈ ವೇಳೆ ಸಹೋದರ ರಾಜ ತಾನು ಕಾಂಗ್ರೆಸ್ ಗೆ ಮತ ಹಾಕಿರುವ ಕುರಿತು ಹೇಳಿಕೊಂಡಿದ್ದಾನೆ. ಇದರಿಂದ ಕ್ರೋಧಗೊಂಡ ಧರ್ಮೇಂದ್ರ ನಾಡ ಪಿಸ್ತೂಲ್ ತಂದು ಆತನ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಲೆ ಜಗಳ ತಡೆಯಲು ಬಂದ ತಾಯಿ ಫೂಲ್ಮತಿಯವರಿಗೂ ಗಾಯಗಳಾಗಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಝಜ್ಜರ್ ಪೊಲೀಸ್ ಆಯುಕ್ತ ರಮೇಶ್ ಕುಮಾರ್ ಅವರು, ಫೈರಿಂಗ್ ಮತ್ತು ಜಗಳದ ಕುರಿತು ಮಾಹಿತಿ ಬಂದಿತ್ತು. ಕೂಡಲೇ ತಾವು ತಮ್ಮ ಸಹೋಧ್ಯೋಗಿಗಳೊಂದಿಗೆ ಇಲ್ಲಿಗೆ ಆಗಮಿಸಿದೆವು. ನಾವು ಬರುವ ಹೊತ್ತಿದೆ ಆರೋಪಿ ಧರ್ಮೇಂದ್ರ ಪರಾರಿಯಾಗಿದ್ದ. ಆತ ಅಕ್ರಮವಾಗಿ ಪಿಸ್ತೂಲು ಹೊಂದಿದ್ದು, ಅದಕ್ಕೆ ಯಾವುದೇ ರೀತಿಯ ಪರವಾನಗಿ ಇರಲಿಲ್ಲ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Comments are closed.