ಕರ್ನಾಟಕ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವುದರಲ್ಲಿ ತಪ್ಪೇನಿದೆ; ಡಿಕೆಶಿ

Pinterest LinkedIn Tumblr


ಹುಬ್ಬಳ್ಳಿ: ಈ ಮೈತ್ರಿ ಸರ್ಕಾರ ಬಿಳಿಸಲು ನೂರು ಶೆಟ್ಟರು, ನೂರು ಯಡಿಯೂರಪ್ಪ ಬಂದರೂ ಆಗಲ್ಲಾ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮೈತ್ರಿ ಸರ್ಕಾರಕ್ಕೆ 23ರವರೆಗೆ ಬಿಜೆಪಿ ನಾಯಕರು ಡೆಡ್​ಲೈನ್ ನೀಡಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅವರಿಬ್ಬರೂ ಈ ಸರ್ಕಾರ ಬಿದ್ದೊಗತ್ತೆ ಅಂತ ಹೆಳ್ತಿದ್ದಾರೆ. ಆದರೆ, ಏನೂ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನೇನು ಸನ್ಯಾಸಿ ಅಲ್ಲ ಅಂತ ಹೇಳಿದಿನಿ. ಮುಂದಿನ ಬಾರಿ ನಮ್ಮ ಸರ್ಕಾರ ಆಡಳಿತಕ್ಕೆ ಬರಲಿ, ಈಗ ನಾನೇನು ಸಿಎಂ ಸ್ಪರ್ಧೆಯ ಸ್ಪರ್ಧಾಳು ಅಲ್ಲ. ಐದು ವರ್ಷ ಕುಮಾರಸ್ವಾಮಿಗೆ ಮಾತು ಕೊಟ್ಟಿದಿವಿ, ಅದಕ್ಕೆ ಬದ್ದವಾಗಿರುತ್ತೇವೆ. ನಮ್ಮ ಸರ್ಕಾರ ಬರಲಿ ಅವಾಗ ಅದರ ಬಗ್ಗೆ ಮಾತನಾಡುತ್ತೇನೆ ಎಂದರು. ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ವಿಚಾರವಾಗಿ ಮಾತನಾಡಿದ ಡಿಕೆಶಿ, ಅದು ಬಹಳ ಸಂತೋಷದ ವಿಚಾರ, ತಪ್ಪೇನಿದೆ. ಆಸೆ ಪಡೊದು ತಪ್ಪಲ್ಲ ಆಗ್ಲಿ ಬಿಡಿ ಎಂದರು.

Comments are closed.