ಕರ್ನಾಟಕ

‘2028ಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ’

Pinterest LinkedIn Tumblr


ಬೆಳಗಾವಿ: 2028ಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮೊದಲ ಮಹಿಳಾ ಸಿಎಂ ಆಗ್ತಾರೆ ಎಂದು ಬೆಳಗಾವಿಯಲ್ಲಿ ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಜನುಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಹೆಬ್ಬಾಳ್ಕರ್ 2018ರಲ್ಲಿ ಎಂ.ಎಲ್.ಎ ಆಗಿದ್ದಾರೆ ಇದು ಕ್ವಾಟರ್ ಫೈನಲ್.2023, 2028ರಲ್ಲೂ ಬೆಳಗಾವಿ ಗ್ರಾಮೀಣ ಜನತೆ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಬೇಕು.ಆಗ ಅದು ನಿಜವಾದ ಸೆಮಿ ಫೈನಲ್.

2028ಕ್ಕೆ ಗೆಲ್ಲಿಸಿ ತಂದ್ರೆ ಮಹಿಳಾ ಮುಖ್ಯಮಂತ್ರಿ ಆಗುವ ಶಕ್ತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಇದೆ. ನಮ್ಮ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಡೀ ಕರ್ನಾಟಕದ ಕಿತ್ತೂರು ರಾಣಿ ಆಗಿ ಆಡಳಿತ ನಡೆಸುತ್ತಾರೆ, ಬರುವ ದಿನದಲ್ಲಿ ಸಿಎಂ ನಾಡನ್ನ ಕಟ್ಟುವ ಕೆಲಸವನ್ನ ಮಾಡ್ತಾರೆ ಅಂತಾ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Comments are closed.