ಕರ್ನಾಟಕ

ಪರೀಕ್ಷಾ ಕೇಂದ್ರ ಬಿಟ್ಟು ಮನೆಯಲ್ಲಿಯೇ ಪರೀಕ್ಷೆ- 37 ವಿದ್ಯಾರ್ಥಿಗಳು ಪೊಲೀಸರ ವಶ

Pinterest LinkedIn Tumblr


ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿಕಾಂ ಪದವಿಯ ಎರಡನೇ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಗೋಲ್‌ಮಾಲ್‌ ನಡೆದಿದೆ. ಪರೀಕ್ಷಾ ಕೇಂದ್ರ ಬಿಟ್ಟು ಬೇರೆ ಕಡೆ ಪರೀಕ್ಷೆ ಬರೆಯುತ್ತಿದ್ದ 37 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಬಾಡಿಗೆ ಮನೆಯಲ್ಲೇ ಕೂತು ಇವರೆಲ್ಲಾ ಪರೀಕ್ಷೆ ಬರೆಯುತ್ತಿದ್ದರು. ಇದೀಗ ಬಯಲಿಗೆ ಬಂದಿದೆ.

ಗುಲ್ಬರ್ಗಾ ವಿವಿ ಪದವಿ ಪರೀಕ್ಷೆ ಮೇ 8ರಿಂದ ಆರಂಭವಾಗಿದೆ. ಅಂದಿನಿಂದಲೂ ವಿವೇಕಾನಂದ ಬಿಎಡ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎಕ್ಸಾಂ ಬರೆಯಬೇಕಿದ್ದ ಈ 37 ವಿದ್ಯಾರ್ಥಿಗಳು ಯಾವುದೋ ಬಾಡಿಗೆ ಮನೆಯಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದರು. ಇವರಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿಯೇ ಸಹಕಾರ ನೀಡ್ತಿದ್ರು ಅಂತ ಹೇಳಲಾಗಿದೆ. ಇಂದು ಬಿಕಾಂ ಎರಡನೇ ಸೆಮಿಸ್ಟರ್‌ನ ಅರ್ಥಶಾಸ್ತ್ರ ಹಾಗೂ ಇಂಗ್ಲಿಷ್ ಪರೀಕ್ಷೆ ಇತ್ತು. ರಾಯಚೂರಿನ ಬಹುತೇಕ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಕೂತು ಪರೀಕ್ಷೆ ಬರೆಯುತ್ತಿದ್ದರು. ಈ ಅಕ್ರಮದ ವಾಸನೆ ಹಿಡಿದ ಪರೀಕ್ಷಾ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ, ಅವರೆಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

ಗುಲ್ಬರ್ಗಾ ವಿವಿ ವ್ಯಾಪ್ತಿಯಲ್ಲಿ ಇಂತಹ ಅಕ್ರಮ ಕಾಮನ್ ಆಗಿವೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರು ಅಕ್ರಮದಲ್ಲಿ ಭಾಗಿಯಾಗಿರುವ ಕಾಲೇಜಿನ ಮಾನ್ಯತೆ ರದ್ದು ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ಸದರಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರೀಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ, ಅಕ್ರಮ ಆರೋಪ ಅಲ್ಲಗಳೆದಿರುವ ಪರೀಕ್ಷೆ ಬರೆಸುತ್ತಿದ್ದ ಪವನ್, ಈ ವಿದ್ಯಾರ್ಥಿಗಳಿಗೆ ಯಾವುದೇ ಸೆಂಟರ್ ಹೆಸರು ಕೊಟ್ಟಿರಲಿಲ್ಲ. ಹಾಗಾಗಿ ಇಲ್ಲಿ ಬರೆಸುತ್ತಿದ್ದೆ ಅಂತಿದ್ದಾರೆ.

ಏನೇ ಇದ್ರೂ ಗುಲರ್ಗಾ ವಿವಿ ವಿರುದ್ಧ ಮತ್ತೆ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಇವರಿಗೆ ಪ್ರಶ್ನೆಪತ್ರಿಕೆಗಳು ಮತ್ತು ಖಾಲಿ ಉತ್ತರ‌ ಪತ್ರಿಕೆಗಳು ಸರಬರಾಜು ಮಾಡಿದವರು ಯಾರು..? ಎಂಬ ಪ್ರಶ್ನೆಗೆ ವಿಶ್ವವಿದ್ಯಾಲಯವೇ ಉತ್ತರ ಕೊಡಬೇಕಿದೆ.

Comments are closed.