ಕರ್ನಾಟಕ

ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗಲ್ಲ – ಡಿ. ಕೆ. ಶಿವಕುಮಾರ್

Pinterest LinkedIn Tumblr


23ರ ಫಲಿತಾಂಶದ ಬಳಿಕ ದೋಸ್ತಿ ಸರ್ಕಾರ ಬಿದ್ದೋಗುತ್ತೆ ಎಂಬ ಬಿಜೆಪಿ ನಾಯಕರ ಭವಿಷ್ಯಕ್ಕೆ ಕಾಂಗ್ರೆಸ್​​ ನಾಯಕರು ತೀರುಗೇಟು ನೀಡಿದ್ದಾರೆ.

ಯುಡಿಯೂರಪ್ಪ ಬಿಜೆಪಿ ಸರ್ಕಾರ ಮಾಡ್ತೀನಿ ಅಂತ ಹಗಲುಗನಸು ಕಾಣ್ತಿದ್ದಾರೆ ಅಷ್ಟೇ. ಯಾವ ಕಾಂಗ್ರೆಸ್​ ಶಾಸಕರೂ ಅವರ ಕೈಗೆ ಸಿಗಲ್ಲ ಅಂತ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅತ್ತ, ಕುಂದಗೋಳದ ಪ್ರಚಾರದಲ್ಲಿ ನಿರತರಾಗಿರೋ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಕೂಡ ಟಾಂಗ್‌ ಕೊಟ್ಟಿದ್ದಾರೆ. ದೀಪಾವಳಿ, ಸಂಕ್ರಾತಿ ಎಲ್ಲಾ ಗಡುವೂ ಮುಗಿದಿದೆ. ಈಗ ಫಲಿತಾಂಶ ಬಳಿಕ ಸರ್ಕಾರ ಬಿದ್ದೋಗುತ್ತೆ ಅಂತಿದ್ದಾರೆ. ತಾಕತ್ತಿದ್ರೆ ಬಿಜೆಪಿ ಸರ್ಕಾರ ರಚನೆ ಮಾಡಲಿ ನೋಡೊಣಾ ಎಂದು ಸವಾಲು ಹಾಕಿದ್ದಾರೆ.

ಹಾಗೆಯೇ, ಸಚಿವ ಜಮೀರ್ ಅಹ್ಮದ್‌ ಖಾನ್‌ ಕೂಡ ಚಾಲೆಂಜ್‌ ಮಾಡಿದ್ದಾರೆ. ಬಿಎಸ್‌ವೈ ಬಿಜೆಪಿ ಸರ್ಕಾರ ರಚನೆ ಮಾಡಿದ್ರೆ ರಾಜಕೀಯದಿಂದಲೇ ನಿವೃತ್ತಿ ಪಡಿತೀನಿ ಅಂತ ಸವಾಲ್​ ಹಾಕಿದ್ದಾರೆ. ಸಚಿವ ಯು.ಟಿ.ಖಾದರ್ ಕೂಡ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ. 5 ವರ್ಷ ಸುಭದ್ರವಾಗಿರುತ್ತೆ ಎಂದಿದ್ದಾರೆ.

ಈ ನಡುವೆ, ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ ಸಿದ್ದರಾಮಯ್ಯ. ಬಿಜೆಪಿಯವರು ಕಸರತ್ತು ಮಾಡಿ ಜಾದವ್ ಸೆಳೆದಿರಬಹುದು. ಆದ್ರೆ, ಬೇರೆ ಯಾವ ಶಾಸಕರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ರಮೇಶ್, ನಾಗೇಂದ್ರ, ಕುಮಟಳ್ಳಿ ಎಲ್ಲರೂ ಪಕ್ಷದಲ್ಲೇ ಇರುತ್ತಾರೆ. ಆ ಭರವಸೆ ನನಗಿದೆ ಎಂದು ಬರೆದುಕೊಂಡಿದ್ದಾರೆ. ಪಕ್ಷದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಎಲ್ಲವೂ ಸರಿಯಾಗಿದೆ. ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಕುಮಾರಸ್ವಾಮಿ ಮುಂದೆಯೂ ಸಿಎಂ ಆಗಿರುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಆದರೆ, ಯಡಿಯೂರಪ್ಪ ಅವರದ್ದು ಮಾತ್ರ ಸರ್ಕಾರ ರಚನೆಯದ್ದೇ ಧ್ಯಾನ. ಕುಂದಗೋಳ, ಚಿಂಚೋಳಿ ಉಪಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ಸರ್ಕಾರ ಖಚಿತ ಅಂತಿದ್ದಾರೆ.

ಇದಕ್ಕೆ ದನಿಗೂಡಿಸಿದ್ದಾರೆ ಬಿಜೆಪಿಯ ಗೋವಿಂದ ಕಾರಜೋಳ ಹಾಗೂ ರವಿಕುಮಾರ್‌. ಮೇ 23ರ ನಂತರ ಕುಮಾರಸ್ವಾಮಿ ಸಿಎಂ ಸ್ಥಾನದಲ್ಲಿ ಇರಲ್ಲ ಅಂತ ರವಿಕುಮಾರ್ ಭವಿಷ್ಯ ನುಡಿದಿದ್ದರೆ, ಫಲಿತಾಂಶದ ಬಳಿಕ ಯಡಿಯೂರಪ್ಪ ಮತ್ತೆ ಸಿಎಂ ಆಗ್ತಾರೆ ಅಂತ ಕಾರಜೋಳ ಹೇಳಿದ್ದಾರೆ.

Comments are closed.