ಕರ್ನಾಟಕ

ನಾನೇನೋ ಕಪ್ಪಗಿದ್ದೀನಿ, ನನ್ನ ಮುಖ ನೋಡಲಿಕ್ಕೆ ಆಗುವುದಿಲ್ಲ, ಸಿದ್ದರಾಮಯ್ಯ ಮುಖ ನೋಡಬಹುದಿತ್ತಲ್ವಾ!

Pinterest LinkedIn Tumblr


ಚಿಂಚೋಳಿ: ನಾನೇನೋ ಕಪ್ಪಗಿದ್ದೀನಿ, ನನ್ನ ಮುಖ ನೋಡಲಿಕ್ಕೆ ಆಗುವುದಿಲ್ಲ ಎಂದಾದರೆ ಸಿದ್ದರಾಮಯ್ಯ ಅವರಮುಖ ನೋಡಿ ಆದರೂ ಕಾಂಗ್ರೆಸ್‌ನಲ್ಲಿ ಇರಬಹುದಿತ್ತಲ್ವಾ..ಇದು ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ್‌ ಜಾಧವ್‌ ಅವರಿಗೆ ಶನಿವಾರ ಕೇಳಿದ ಪ್ರಶ್ನೆ.

ಅರಣಕಲ್‌ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಠೊಡ್‌ ಅವರ ಪರ ಪ್ರಚಾರ ನಡೆಸುತ್ತಿದ್ದ ಖರ್ಗೆ ಡಾ.ಜಾಧವ್‌ ವಿರುದ್ಧ ತೀವ್ರವಾಗಿ ಕಿಡಿ ಕಾರಿದರು.

ಜಾಧವ್‌ ಹೋದಲ್ಲೆಲ್ಲಾ ನನ್ನ ವಿರುದ್ಧ ಹೇಳಿಕೊಳ್ಳುತ್ತಿದ್ದಾನೆ, ನಾನು ಇದಕ್ಕೆಲ್ಲಾ ಕ್ಯಾರ್‌ ಮಾಡುವವನಲ್ಲ ಎಂದರು.

ಖರ್ಗೆ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ ತೊರೆದಿದ್ದ ಡಾ.ಜಾಧವ್‌ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದರು. ರಾಜ್ಯದಲ್ಲಿ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಕಲಬುರಗಿಯಾಗಿದ್ದು, ಮೇ 23 ರ ಫ‌ಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ.

Comments are closed.