ಕರ್ನಾಟಕ

ರಣವಿಕ್ರಮನಿಗೆ ಮಗಳ ಮದುವೆಯ ಮಮತೆಯ ಕರೆಯೋಲೆ ನೀಡಿದ ರಣಧೀರ!

Pinterest LinkedIn Tumblr

ಬೆಂಗಳೂರು: ಮಗಳ ಮದುವೆಯ ತಯಾರಿ, ಆಮಂತ್ರಣ ಪತ್ರಿಕೆ ಹಂಚಿಕೆಯಲ್ಲಿ  ತೊಡಗಿರುವ ನಟ ಕ್ರೇಜಿಸ್ಟಾರ್ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಗೆ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆ ನೀಡಿದರು.

ಚಿತ್ರರಂಗದ ಸ್ನೇಹಿತರಿಗೆ ತಾವೇ ಖುದ್ದು ಹೋಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ರವಿಚಂದ್ರನ್ ನೀಡುತ್ತಿದ್ದಾರೆ. ಪುನೀತ್’ಗೆ ವಿವಾಹಕ್ಕೆ ಆಹ್ವಾನ ನೀಡಿರುವ ರವಿಚಂದ್ರನ್ ಇಡೀ ಕುಟುಂಬವನ್ನು ಸ್ವಾಗತಿಸಿದ್ದಾರೆ.

ರಾಜ್ ಕುಮಾರ್ ಹಾಗೂ ರವಿಚಂದ್ರನ್ ಕುಟುಂಬ ಬಹಳ ವರ್ಷಗಳಿಂದ ಒಡನಾಟ ಹೊಂದಿದೆ. ಸೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಜೊತೆಗೆ ರವಿಚಂದ್ರನ್ ಉತ್ತಮ ಬಾಂದವ್ಯ ಹೊಂದಿದ್ದಾರೆ.

Comments are closed.