ರಾಷ್ಟ್ರೀಯ

ಗಡಿ ಉಲ್ಲಂಘಿಸಿದ ಪಾಕ್ ಸರಕು ವಿಮಾನ: ಜೈಪುರದಲ್ಲಿ ಬಲವಂತದಿಂದ ಇಳಿಸಿದ ಭಾರತೀಯ ವಾಯುಪಡೆ

Pinterest LinkedIn Tumblr

ನವದೆಹಲಿ: ಜಾರ್ಜಿಯಾದ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಫಾಕಿಸ್ತಾನದ ಮೂಲಕ ದೇಶವನ್ನು ಪ್ರವೇಶಿಸಿದ್ದು ಇದನ್ನು ಭಾರತೀಯ ವಾಯುಪಡೆ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತದಿಂದ ಇಳಿಸಿರುವ ಘಟನೆ ನಡೆದಿದೆ.

ಜಾರ್ಜಿಯಾದ ಆಂಟೊನೊವ್ ಎಎನ್-12 ಬೃಹತ್ ಸರಕು ಸಾಗಣೆ ವಿಮಾನವನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಜೈಪುರದಲ್ಲಿ ಇಳಿಸಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.

ಐಎಎಫ್ ನ ವಾಯು ರಕ್ಷಣಾ ವಿಮಾನದಿಂದ ವಿಮಾನವನ್ನು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಲು ಬಲವಂತದ ಸೂಚನೆ ನಿಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನವು ಉತ್ತರ ಗುಜರಾತ್ ನಲ್ಲಿ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದೆ. ಇದನ್ನು ಗಮನಿಸಿದ ವಾಯುಸೇನೆ ತಕ್ಷಣ ಎಚ್ಚರಗೊಂಡು ಐಎಎಫ್ ಏರ್ ಡಿಫೆನ್ಸ್ ಏರ್ಕ್ರಾಫ್ಟ್ ಮೂಲಕ ವಿಮಾನವನ್ನು ಪ್ರತಿಬಂಧಿಸಿ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಸಿದೆ.”ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.

ರಾಡಾರ್ ಗಳು ಭಾರತದ ಗಡಿ ಪ್ರವೇಶಿಸುವ ವಿಮಾನವನ್ನು ಪತ್ತೆ ಹಚ್ಚಿದ ನಂತರ ಸರಕು ವಿಮಾನವನ್ನು ಪ್ರತಿಬಂಧಿಸಲು ಐಎಎಫ್ ಎರಡು ಸುಖೋಯ್ ಸು -30 ಫೈಟರ್ ಜೆಟ್ ಗಳನ್ನು ನಿಯೋಜಿಸಿತ್ತು.

ಅಮೆರಿಕಾದ ಜಾರ್ಜಿಯಾದಿಂದ ದೆಹಲಿಗೆ ಬರಬೇಕಿದ್ದ ವಿಮಾನ ಕರಾಚಿಯ್ಯಿಂದ ಮಾರ್ಗ ಬದಲಿಸಿ ಉತ್ತರ ಗುಜರಾತ್ ನ ಅಪರಿಚಿತ ಪ್ರದೇಶದಲ್ಲಿ ಭಾರತವನ್ನು ಪ್ರವೇಶಿಸಿದೆ.

Comments are closed.