ಕರ್ನಾಟಕ

ಬೆಂಗಳೂರಿನ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ಉಗ್ರರು..?

Pinterest LinkedIn Tumblr


ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ಉಗ್ರರು ಇರುವ ಬಗ್ಗೆ ಅನುಮಾನ ಶುರುವಾಗಿದೆ. ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿ ಮೆಟಲ್ ಡಿಟೆಕ್ಟರ್‌ ಬಳಿ ಬಂದಾಗ, ಶಬ್ಧ ಬಂದಿದ್ದು, ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ.

ಮೆಜೆಸ್ಟಿಕ್ ಮೆಟ್ರೋದಲ್ಲಿ ನಿನ್ನೆ ರಾತ್ರಿ ಓರ್ವ ವ್ಯಕ್ತಿ ರಿವಾಲ್ವರ್ ಮತ್ತು ಬ್ಯಾಗ್ ಹಿಡಿದು ಬಂದಿದ್ದು, ಮೆಟಲ್ ಡಿಟೆಕ್ಟರ್ ಬಳಿ ಬಂದಾಗ ಶಬ್ಧ ಕೇಳಿ ಬಂದಿದೆ. ಈ ವೇಳೆ ಮೆಟ್ರೋ ಸಿಬ್ಬಂದಿ ತಪಾಸಣೆ ನಡೆಸಿದ್ದು, ಸಿಬ್ಬಂದಿಯ ಕಣ್ತಪ್ಪಿಸಿ ಶಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ.

ಕೂಡಲೇ ಮೆಟ್ರೋ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿಲ್ದಾಣದಲ್ಲಿದ್ದ ಪೊಲೀಸರಿಗೂ ಸಿಗದಂತೆ ಶಂಕಿತ ಮಾಯವಾಗಿದ್ದಾನೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನೀಡಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್, ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಾಂಬ್ ನಿಷ್ಕ್ರೀಯ ದಳದಿಂದಲೂ ಕೂಡ ಪರಿಶೀಲನೆ ನಡೆದಿದೆ. ಆದರೆ ಶಂಕಿತ ವ್ಯಕ್ತಿಯನ್ನ ಬಂಧಿಸಲು ಆಗಿಲ್ಲ. ಕೂಡಲೇ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಬಂದೋಬಸ್ತ್ ಹೆಚ್ಚಿಸಿದ್ದಾರೆ.

ಇನ್ನು ಶಂಕಿತನ ಚಲನವಲನ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಫೂಟೇಜ್‌ನ ಸಹಾಯದಿಂದ ಪೊಲೀಸರು ವಿಶೇಷ ತಂಡ ರಚಿಸಿ, ಶಂಕಿತನನ್ನು ಹುಡುಕುವ ಕಾರ್ಯ ಮುಂದುವರಿಸಿದ್ದಾರೆ.

Comments are closed.