ಕರ್ನಾಟಕ

ಯಡಿಯೂರಪ್ಪ ಕೇಳಿದ್ದ ಇಂಜಿನಿಯರ್​ ವರ್ಗಾವಣೆ ಮಾಡಿದೀನಿ; ಎಚ್​​.ಡಿ ರೇವಣ್ಣ

Pinterest LinkedIn Tumblr
H D Revanna

ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಕೇಳಿದ್ದ ಇಂಜಿನಿಯರ್​ ವರ್ಗಾವಣೆ ಮಾಡಿಕೊಟ್ಟಿದ್ದೀನಿ. ಇವರಿಗೆ ಬೆಳಿಗ್ಗೆ ಎದ್ದ ಕೂಡಲೇ ನನ್ನ ಬಗ್ಗೆ ಮಾತಾಡಲಿಲ್ಲ ಅಂದ್ರೆ ದಿನ ಕಳೆಯೋದಿಲ್ಲ. ಹುಬ್ಬಳಿಗೆ ಬಿಎಸ್​​ವೈ ಅಳಿಯನೇ ಉಸ್ತುವಾರಿ. ಕೆ.ಎಸ್​​ ಈಶ್ವರಪ್ಪ ಹೇಳಿದ ಇಂಜಿನಿಯರ್ ಅವರನ್ನ ಕೂಡ​​​ ಶಿವಮೊಗ್ಗಕ್ಕೆ ಹಾಕಿದ್ದೀನಿ. ಬೇಕಿದ್ದರೇ ಇವರನ್ನೆಲ್ಲಾ 24 ಗಂಟೆಯೊಳಗೆ ನಾನು ವರ್ಗಾವಣೆ ಮಾಡಬಹುದಿತ್ತಲ್ಲವೇ. ಅವರನ್ನೇ ಕೇಳಿ ಯಾರಿಗೆ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ” ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಎಚ್​​.ಡಿ ರೇವಣ್ಣನವರು ಬಿಎಸ್​​ವೈಗೆ ತಿರುಗೇಟು ನೀಡಿದ್ದಾರೆ.

ಇನ್ನು ನನ್ನ ಬಗ್ಗೆ ಮಾತಾಡದೇ ಹೋದರೇ ಬಿಜೆಪಿ ನಾಯಕರಿಗೆ ದಿನ ಕಳೆಯೋದಿಲ್ಲ. ಬಿ.ಎಸ್​​ ಯಡಿಯೂರಪ್ಪ ತುಂಬಾ ದೊಡ್ಡವರು. ನಾನು ಇವರ ಬಗ್ಗೆ ಮಾತಾಡೋದಿಲ್ಲ. ನನ್ನ ಕ್ಷೇತ್ರದ ಬಗ್ಗೆ ಮಾಧ್ಯಮದವರು ಹೆಚ್ಚಿನ ಪ್ರಚಾರ ಮಾಡುತ್ತಿದ್ದೀರಿ. ಹಣ ನೀಡದೆಯೇ ಪ್ರಚಾರ ನೀಡುತ್ತಿರುವುದಕ್ಕೆ ನಿಮಗೆ ಧನ್ಯವಾದ. ಪ್ರಜ್ವಲ್​​ ರೇವಣ್ಣ ದೆಹಲಿಗೆ ಹೋಗುತ್ತಾರೆ. ಈ ಬಗ್ಗೆ ಚಿಂತೆ ಬಿಡಿ ಎಂದು ಮಾಧ್ಯಮದವರಿಗೆ ಸಚಿವ ಎಚ್​​.ಡಿ ರೇವಣ್ಣ ಕುಟುಕಿದರು.

ಪಾಪ ಯಡಿಯೂರಪ್ಪನಿಗೆ ವಯಸ್ಸಾಗಿದೆ. ಅರಳು ಮರಳು ಶುರುವಾಗಿದೆ. ಇವರ ಬಗ್ಗೆ ನಾನೇನು ಮಾತಾಡಲಿ. ಮೈತ್ರಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇ. ಜೆಡಿಎಸ್​​ 7ಕ್ಕೆ ಏಳು ಸ್ಥಾನ ಗೆದ್ದರೂ ಯಾವುದೇ ಅಚ್ಚರಿ ಪಡಬೇಕಿಲ್ಲ. ಬಿಜೆಪಿಗೆ ಲೆಕ್ಕ ಮಾಡೋಕೆ ಬರಲ್ಲ. ಸುಮ್ಮನೆ 20 ಕ್ಷೇತ್ರದಲ್ಲಿ ಗೆಲ್ತೀವಿ ಎನ್ನುತ್ತಾರೆ. ಇವರಿಗೆ ತಲೆ ಕೆಟ್ಟೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ ರಾಜೀವ್​​ ಗಾಂಧಿಯವರು, ನಮ್ಮ ಕಣ್ಮುಂದೆ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತಾಡಿದ್ದು ಸರಿಯಲ್ಲ. ಹಾಗೇ ಮಾತಾಡಿರೋದು ಅವರಿಗೆ ಬಿಟ್ಟ ವಿಚಾರ. ರಾಜ್ಯಕ್ಕೆ ರಾಜೀವ್​​ ಗಾಂಧಿಯವರ ಕೊಡುಗೆ ತುಂಬಾಯಿದೆ. ಇದು ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿದೆ ಎಂದು ತಿಳಿಸಿದರು.

Comments are closed.