ಕರ್ನಾಟಕ

ಎಂಕಾಂ ಓದಿ, ಸ್ವಾಮೀಜಿ ಆಗಿ.. ಈಗ ಆಗಲು ಹೊರಟಿದ್ದು MLA..!

Pinterest LinkedIn Tumblr

ಕಲಬುರಗಿ: ಕಲಬುರಗಿಯಲ್ಲಿ ಡಿಫ್ರೆಂಟ್ ಕ್ಯಾಂಡಿಡೇಟ್ ಒಬ್ಬರು ಚುನಾವಣಾ ಕಣಕ್ಕಿಳಿದಿದ್ದಾರೆ. ಇವರು ಎಂಕಾಂ ಓದಿದ್ದು, ಸದ್ಯ ಸ್ವಾಮೀಜಿಯಾಗಿದ್ದಾರೆ. ಆದ್ರೀಗ ಎಂಎಲ್‌ಎ ಆಗೋಕ್ಕೆ ಹೊರಟಿದ್ದಾರೆ.

ಚಿಂಚೋಳಿ ಉಪಚುನಾವಣೆಗೆ ತಯಾರಿ ನಡೆಯುತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ವಿಜಯಪುರ ಮೂಲದ ವೆಂಕಟೇಶ್ವರ ಸ್ವಾಮೀಜಿ ಕಣಕ್ಕಿಳಿದಿದ್ದಾರೆ.

ಇನ್ನು ಇವರ ಆಸ್ತಿ ವಿವರ ಕೇಳಿದ್ರೆ ನಿಮಗೆ ಅಚ್ಚರಿಯಾಗೋದು ಗ್ಯಾರಂಟಿ. ಚರಾಸ್ತಿ, ಸ್ಥಿರಾಸ್ತಿ ಇಲ್ಲ. ನಗದು ಕೇವರ 9 ರೂಪಯಿ ಮಾತ್ರ ಇದೆ. ಇನ್ನು ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ.

ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಮಲ್ಲಿಕಾರ್ಜುನ್ ಖರ್ಗೆ ಮತ್ತು ಉಮೇಶ್ ಜಾಧವ್‌ರಂಥ ಸ್ಟ್ರಾಂಗ್ ಕ್ಯಾಂಡಿಡೇಟ್‌ ಎದುರು ವೆಂಕಟೇಶ್ವರ ಸ್ವಾಮೀಜಿ ಅಖಾಡಕ್ಕಿಳಿದಿರುವುದು ವಿಶೇಷ.

Comments are closed.