ಹಾಸನ: ಪೆಟ್ರೋಲ್ ಹಾಕಿಸುವಾಗ ಕಲಬೆರಕೆ ಮಿಶ್ರಣವಾದ ಕಾರಣ ಟ್ರ್ಯಾಕ್ಟರ್ ಮಾಲೀಕ, ಬಂಕ್ ಸಿಬ್ಬಂದಿ ಜೊತೆ ಜಗಳವಾಡಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವಪಟ್ಟಣ ಮತ್ತು ಕೇರಳಪುರ ರಸ್ತೆಯಲ್ಲಿರುವ ಏಸರ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಪೆಟ್ರೋಲ್ ಹಾಕಿದಾಗ ಟ್ರ್ಯಾಕ್ಟರ್ ಕೆಟ್ಟು ನಿಂತಿದ್ದು, ಪೆಟ್ರೋಲ್‌ನಲ್ಲಿ ಸೀಮೆಎಣ್ಣೆ ಮಿಕ್ಸ್ ಮಾಡುತ್ತಾರೆಂದು ವಾಹನ ಮಾಲೀಕ ಆರೋಪಿಸಿದ್ದಾರೆ.
ವಾಹನ ಮಾಲಿಕನಿಂದ ಚಂದ್ರು ಎಂಬುವರಿಂದ ಬಂಕ್ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದು, ಡೀಸೆಲ್ ಪರೀಕ್ಷಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಸತ್ಯ ಬಯಲು ಮಾಡಲು ಬಂಕ್ ಸಿಬ್ಬಂದಿ ಹಿಂದೇಟು ಹಾಕಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕೊಣನೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.