ಕರ್ನಾಟಕ

SSLC ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಇವರಿಬ್ಬರ ಸಾಧನೆ ನೋಡಿ….

Pinterest LinkedIn Tumblr

ಕುಮಟಾದ ನಾಗಾಂಜಲಿ

ಬೆಂಗಳೂರು: ಬಹುನಿರೀಕ್ಷಿತ 10ನೇ ತರಗತಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆ ಈ ವರ್ಷದ ಫಲಿತಾಂಶದಲ್ಲೂ ಹೆಣ್ಣು ಮಕ್ಕಳೆ ಮೇಲುಗೈ ಸಾಧಿಸಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಈ ವರ್ಷದ ಹೈಲೆಟ್ಸ್.

ಹೆಣ್ಣು ಮಕ್ಕಳೇ ಟಾಪ್ : ರಾಜ್ಯಾದ್ಯಂತ 8.41 ಲಕ್ಷ ವಿದ್ಯಾರ್ಥಿಗಳು ಈ ಬಾರಿ 10ನೇ ತರಗತಿ ಪರೀಕ್ಷೆ ಬರೆದಿದ್ದರು. ಈ ಪೈಕಿ 4.47 ಲಕ್ಷ ಬಾಲಕರು ಹಾಗೂ 3.93 ಲಕ್ಷ ಬಾಲಕಿಯರು ಪರೀಕ್ಷೆ ಬರೆದಿದ್ದರು. ಆದರೆ, ಎಂದಿನಂತೆ ಹೆಣ್ಣು ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿರುವುದು ವಿಶೇಷ.

ಪರೀಕ್ಷೆ ಎದುರಿಸಿರುವ 3.93 ಲಕ್ಷ ಬಾಲಕಿಯರು ಶೇ.79.59 ರ ಸರಾಸರಿಯಲ್ಲಿ ತೇರ್ಗಡೆಯಾಗಿದ್ದಾರೆ. ಬಾಲಕರ ತೇರ್ಗಡೆ ಪ್ರಮಾಣ ಶೇ 68.46 ರಷ್ಟು ದಾಖಲಾಗಿದೆ.

ಈ ಪೈಕಿ ಅತ್ತಿಬೆಲೆಯ ಸೈಂಟ್ ಫಿಲೋಮಿನಾ ಶಾಲೆ ಡಿ.ಸೃಜನಾ ಹಾಗೂ ಕುಮಟಾದ ನಾಗಾಂಜಲಿ 625ಕ್ಕೆ 625 ಅಂಕಗಳನ್ನು ಗಳಿಸುವ ರಾಜ್ಯ ಮಟ್ಟದಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ಉಳಿದಂತೆ ರಾಜ್ಯದ 11 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ.

ಗ್ರಾಮೀಣ ಮಕ್ಕಳ ಉತ್ತಮ ಸಾಧನೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂದರೆ ಎಲ್ಲರೂ ಮೂಗು ಮುರಿಯುವುದೇ ಹೆಚ್ಚು. ಆದರೆ ಈ ವರ್ಷದ 10ನೇ ತರಗತಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಭಾಗದ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ.

ನಗರ ಭಾಗದ ಮಕ್ಕಳು ಶೇ.70.07 ರಷ್ಟು ತೇರ್ಗಡೆಯಾಗಿದ್ದರೆ, ಶೇ.76.67 ರಷ್ಟು ತೇರ್ಗಡೆಯಾಗುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ದಾಖಲೆ ಬರೆದಿದ್ದಾರೆ.

624 ಅಂಕ ಪಡೆದ ವಿದ್ಯಾರ್ಥಿಗಳು

1. ಸೆಂಟ್ ಜಾನ್ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರದ ಭಾವನಾ ಯು.ಎಸ್.

2.ಸೌಂದರ್ಯ ಹೈ ಸ್ಕೂಲ್, ಬೆಂಗಳೂರು ಉತ್ತರದ ಭಾವನಾ .ಆರ್

3 ಲಿಟಲ್ ಲಿಲ್ಲಿ ಇಂಗ್ಲಿಷ್ ಹೈ ಸ್ಕೂಲ್, ಬೆಂಗಳೂರು ಉತ್ತರದ
ಸಾಯಿರಾಂ

4.ಸಮಾಜ ಸೇವಾ ಮಂಡಳಿ ಹೈ ಸ್ಕೂಲ್, ಬೆಂಗಳೂರು ದಕ್ಷಿಣದಶಾಂಭವಿ ಎಚ್.ವಿ

5. ಶ್ರೀ ಸಿದ್ಧಗಂಗಾ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ತುಮಕೂರಿನ ಹರ್ಷಿತ್ .ಸಿ

6. ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಪುತ್ತೂರಿನ ಸಿಂಚನಾ ಲಕ್ಷ್ಮೀ

7.  ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಸುಳ್ಯದ ಕೃಪಾ ಕೆ.ಆರ್

8. ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳದ ಅನುಪಮಾ ಕಾಮತ್
9 . ವಿಟ್‌ಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಬಂಟ್ವಾಳದ ಚಿನ್ಮಯ್

10. ವಿಜಯ ಹೈ ಸ್ಕೂಲ್, ಹಾಸನದ  ಪ್ರಗತಿ .ಎಂ. ಗೌಡ

11. ವಿಜಯ್ ಹೈ ಸ್ಕೂಲ್ ಹಾಸನದ ಅಭಿನ್ ಬಿ

73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.

Comments are closed.