
ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ ಹಾಸ್ಯನಟ ಸಾಧುಕೋಕಿಲಾ ಅವರನ್ನು ಕರೆದುಕೊಂಡು ಬರುವುದಾಗಿ ಹೇಳಿ ‘ರಾವಣ’ ಸಿನಿಮಾದ ನಿರ್ಮಾಪಕರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಫಿಲ್ಮ್ ಚೆಂಬರ್ಗೆ ನಿರ್ಮಾಪಕ ದೂರನ್ನು ನೀಡಿದ್ದಾರೆ.
ಹಾಸ್ಯ ನಟ ಸಾಧುಕೋಕಿಲ ಹೆಸರಿನಲ್ಲಿ ರಾವಣ ಸಿನಿಮಾದ ನಿರ್ಮಾಪಕ ಶಿವಶಂಕರ್ ಎಂಬವರಿಗೆ ಹರಿಹರನ್ ಹಾಗೂ ಅವಿ ಎಂಬ ಇಬ್ಬರು ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ನೀಡಿದ ದೂರಿನ ಪ್ರತಿ
ಸಾಧು ಕೋಕಿಲ ಅವರನ್ನು ಕರೆಸಲು ಒಂದು ದಿನಕ್ಕೆ ಒಂದು ಲಕ್ಷ ಹಣ ನೀಡಬೇಕು ಎಂದು ಹೇಳಿ ಅಡ್ವಾನ್ಸ್ ರೂಪದಲ್ಲಿ ಅವಿ ಎಂಬಾತ ಮೂವತ್ತೈದು ಸಾವಿರ ಪಡೆದುಕೊಂಡಿದ್ದ. ಎನ್ನಲಾಗಿದೆ. ನಂತರ ಇದೇ ತಿಂಗಳ 18ನೇ ತಾರೀಕಿನಂದು ಹುಬ್ಬಳ್ಳಿಯಲ್ಲಿ ಎರಡು ಲಕ್ಷ ಖರ್ಚು ಮಾಡಿ ಶೂಟಿಂಗ್ ರೆಡಿ ಮಾಡಿಸಿಕೊಂಡಿದ್ದ ವೇಳೆ ಸಾಧು ಕೋಕಿಲಾ ಅವರು ಅಲ್ಲಿಗೆ ಬಂದಿರಲಿಲ್ಲ ಎನ್ನಲಾಗಿದೆ.
ಆಗ ವಂಚನೆ ಮಾಡಿದ್ದಾರೆಂದು ಶಿವಶಂಕರ್ ಗೆ ಗೊತ್ತಾಗಿದೆ ಎಂದು ತಿಳಿದ ಶಿವಶಂಕರ್ ಸಾಧು ಕೋಕಿಲ ಅವರ ಬಳಿ ಮಾತನಾಡಿದ್ದಾರೆ. ಈ ವೇಳೆ ಸಾಧು ಕೋಕಿಲ ಅವರು ವಿದೇಶದಲ್ಲಿದ್ದರು. ತಾನು ಯಾರ ಬಳಿಯೂ ಬರುವುದಾಗಿ ಹೇಳಿಲ್ಲ ಎಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
Comments are closed.