ರಾಷ್ಟ್ರೀಯ

ಅನುಮತಿ ಪಡೆಯದೇ ಚುನಾವಣಾ ರ‍್ಯಾಲಿ ನಡೆಸಿದ ಗೌತಮ್​ ಗಂಭೀರ್​ ವಿರುದ್ಧ ದೂರು

Pinterest LinkedIn Tumblr


ನವದೆಹಲಿ:​ ಚುನಾವಣಾ ಆಯೋಗದ ಅನುಮತಿ ಪಡೆಯದೇ ಚುನಾವಣಾ ರ‍್ಯಾಲಿ ನಡೆಸಿದ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್ ವಿರುದ್ಧ ಆಯೋಗ ದೂರು ದಾಖಲಿಸಿದೆ.

ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದ ಗೌತಮ್​ ಗಂಭೀರ್ ಅವರನ್ನು ಹಿರಿಯ ನಾಯಕ ಅರುಣ್​ ಜೇಟ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ಟಿಕೆಟ್​ ಕೂಡ ನೀಡಿದೆ

ಏಪ್ರಿಲ್​ 25ರಂದು ದೆಹಲಿಯ ಜಂಗ್​ಪುರದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

ಇನ್ನು ಈ ಕುರಿತು ಟ್ವೀಟ್​ನಲ್ಲಿ ಟೀಕೆ ವ್ಯಕ್ತಪಡಿಸಿದ ಎಎಪಿ ಅಭ್ಯರ್ಥಿ ಅತಿಶಿ, ಮೊದಲು ಅವರ ನಾಮಪತ್ರ ಗೊಂದಲದಿಂದ ಕೂಡಿತು. ಬಳಿಕ ಎರಡು ಮತದಾರರ ಚೀಟಿ ಹೊಂದಿದ್ದ ಅವರು ಕಾನೂನು ಉಲ್ಲಂಘನೆ ಮಾಡಿದ್ದರು. ಈಗ ಅಕ್ರಮವಾಗಿ ರ‍್ಯಾಲಿ ನಡೆಸಿದ್ದಾರೆ. ಆಟ ಆಡುವ ನಿಮಗೆ ಯಾಕೆ ನಿಯಮಗಳ ಬಗ್ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪೂರ್ವ ದೆಹಲಿಯ ಲೋಕಸಭಾ ಚುನಾವಣಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಮಹೇಶ್​, ಈ ಕುರಿತು ದೂರು ದಾಖಲಿಸುವಂತೆ ತಿಳಿಸಿದ್ದಾರೆ.

ಗೌತಮ್​ ನಾಮಪತ್ರ ವೇಳೆ ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂದು ಆಪ್​ ನಾಯಕಿ ಅತಿಶಿ ಆರೋಪಿಸಿದ್ದರು. ಅಲ್ಲದೇ ಅವರು ದೆಹಲಿಯ ಕರೋಲ್​ ಬಾಗ್​ ಮತ್ತು ರಾಜಿಂದೆರ್​ ನಗರದಲ್ಲಿ ವೋಟರ್​ ಐಟಿ ಹೊಂದಿದ್ದಾರೆ ಎಂದು ದೂರಿದ್ದರು. ಈ ಆರೋಪ ಪ್ರಕರಣದ ಕುರಿತು ನ್ಯಾಯಾಲಯ ಮೇ.1ರಂದು ವಿಚಾರಣೆ ನಡೆಸಲಿದೆ.

ದೆಹಲಿಯ ಶ್ರೀಮಂತ ಅಭ್ಯರ್ಥಿ ಗಂಭೀರ್​ ಆಗಿದ್ದು ಅವರ ಆದಾಯ 12.4 ಕೋಟಿ ಎಂದು 2017-18ರ ಆದಾಯ ತೆರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಅವರ ಒಟ್ಟಾರೆ ಆಸ್ತಿ ಮೌಲ್ಯ 147 ಕೋಟಿ ಇದೆ.

ಗಂಭೀರ್​ ಎದುರಿಗೆ ಕಾಂಗ್ರೆಸ್​ನ ಅರವಿಂದರ್ ಸಿಂಗ್​ ಲವ್ಲಿ ಹಾಗೂ ಆಪ್​ನ ಆತಿಶಿ ಕಣದಲ್ಲಿದ್ದಾರೆ. ಆರನೇ ಹಂತದ ಚುನಾವಣೆ ಮೇ 12ರಂದು ಇಲ್ಲಿ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

Comments are closed.