ಕರ್ನಾಟಕ

ಈ ತಿಂಗಳ ಕೊನೆಯಲ್ಲಿ ಎಸೆಸೆಲ್ಸಿ ಫ‌ಲಿತಾಂಶ ಸಾಧ್ಯತೆ?

Pinterest LinkedIn Tumblr


ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಭರದಿಂದ ಸಾಗಿದ್ದು, ತಿಂಗಳ ಅಂತ್ಯದಲ್ಲಿ ಹೊರಬೀಳುವ ಸಾಧ್ಯತೆ ಇದೆ.

ಎ.10ರಿಂದ 230 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, 77,754 ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ. ಮೌಲ್ಯಮಾಪನ ಮಾಡಿದ ತತ್‌ಕ್ಷಣವೇ ಅಂಕಗಳನ್ನು ಆನ್‌ಲೈನ್‌ ಪೋರ್ಟಿಂಗ್‌ ಮೂಲಕ ನಮೂದಿಸುವುದರಿಂದ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ಕೂಡಲೇ ಫ‌ಲಿತಾಂಶ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಹುತೇಕ ಕಡೆಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ಕ್ಯಾಂಪ್‌ಗ್ಳಲ್ಲಿ ನಡೆಯುತ್ತಿದೆ. ಈ ವಾರದ ಅಂತ್ಯದೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಲಿದ್ದು, ಸಿಇಟಿ ಪರೀಕ್ಷೆಗೆ ತೊಂದರೆ ಆಗದಂತೆ ಫ‌ಲಿತಾಂಶ ಘೋಷಣೆ ಮಾಡುವ ಸಾಧ್ಯತೆ ಇದೆ.

ಮಾ. 21ರಿಂದ ಎ. 4ರ ವರೆಗೆ ನಡೆದ ಪರೀಕ್ಷೆಯಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 5,202 ಸರಕಾರಿ ಪ್ರೌಢಶಾಲೆ, 3,244 ಅನುದಾನಿತ, 6,004 ಅನುದಾನ ರಹಿತ ಸಹಿತ 14,450 ಪ್ರೌಢಶಾಲೆಗಳ 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

Comments are closed.