ಕರ್ನಾಟಕ

ಬಾಲಾಕೋಟ್‌ನ ಯಾವುದೋ ಕಾಡಿನಲ್ಲಿ ಬಾಂಬ್ ಹಾಕಿ ಬಂದಿದ್ದಾರೆ?: ಕುಮಾರಸ್ವಾಮಿ

Pinterest LinkedIn Tumblr


ಹುಬ್ಬಳ್ಳಿ: ಭಾರತೀಯ ಯೋಧರ ಕುರಿತು ಹೇಳಿಕೆ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾರತೀಯ ವಾಯುಸೇನೆಯ ದಾಳಿಯನ್ನೇ ಪ್ರಶ್ನಿಸುವಂತಾ ಮಾತುಗಳನ್ನು ಆಡಿದ್ದಾರೆ.

2014ರಲ್ಲಿ ಸಂಪೂರ್ಣ ಬಹುಮತ ಮತ್ತು ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತ್ತು. ಇಂದಿರಾಗಾಂಧಿಯವರ ನಂತರ ಸಂಪೂರ್ಣ ಸ್ವಾತಂತ್ರ್ಯ ಮೋದಿಯವರಿಗೆ ಸಿಕ್ಕಿದ್ದು, ಅವರೇಕೆ ಸದ್ವಿನಿಯೋಗ ಮಾಡಿಕೊಳ್ಳಲಿಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಮತ್ತು ಈ ರಾಜ್ಯದ ಜನತೆಗೆ ಏನೇನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಲ್ಲೇನು ಇಲ್ಲ. ಅದಕ್ಕೆ ನಮ್ಮ ಮೇಲೆ ವೃಥಾ ಆರೋಪ ಮಾಡಿ ಮತದಾರರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ.

ಹುತಾತ್ಮ ಯೋಧರ ಹೆಸರಿನಲ್ಲಿ, ಸೇನೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಪಾಕಿಸ್ತಾನದ ಬಾಲಾಕೋಟ್ ಬಗ್ಗೆ ಇಲ್ಲಿ ಕುಳಿತ ಜನರಿಗೇನು ಗೊತ್ತಿಲ್ಲ. ಅಲ್ಲಿ ಯಾವುದೋ ಕಾಡಿನಲ್ಲಿ ಬಾಂಬ್ ಹಾಕಿ ಬಂದಿದ್ದಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಸೇನೆಯ ದಾಳಿಯನ್ನೇ ಪ್ರಶ್ನಿಸಿದ್ದಾರೆ.

ದೇಶದ ಜನತೆ ಮುಂದೆ ಕೇಂದ್ರ ಸರ್ಕಾರ ಮತ್ತು ಮೋದಿಯವರು ಸಂಪೂರ್ಣ ವಾಸ್ತವ ಸುದ್ದಿಯನ್ನು ನೀಡಲೇ ಇಲ್ಲ. ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ಕೇಳಿ, ನೋಡಿ ನಾವೆಲ್ಲ ತಿಳಿದುಕೊಂಡಿದ್ದೇವಷ್ಟೆ ಎಂದರು.

Comments are closed.