ಕರ್ನಾಟಕ

ನನ್ನ ಕ್ಷೇತ್ರದಲ್ಲಿ ಲೀಡ್ ಬರದಿದ್ದರೆ ರಾಜೀನಾಮೆ: ಸಚಿವ ರಹೀಂ ಖಾನ್ ಹೇಳಿಕೆ

Pinterest LinkedIn Tumblr


ಬೀದರ್: ಈಶ್ವರ್ ಖಂಡ್ರೆಗೆ ನನ್ನ ಕ್ಷೇತ್ರದಿಂದ ಬಹುಮತ ಕೊಡದಿದ್ರೆ ರಾಜೀನಾಮೆ ನೀಡುವೆ ಎಂದು ಬೀದರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ರಹೀಂ ಖಾನ್ ಹೇಳಿಕೆ ನೀಡಿದ್ದಾರೆ.

ಬೀದರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಬೀದರ್ ಉತ್ತರ ಕ್ಷೇತ್ರದಿಂದ 20 ಸಾವಿರಕ್ಕೂ ಹೆಚ್ಚು ಲೀಡ್ ಬರಲಿದೆ. ಈಶ್ವರ್ ಖಂಡ್ರೆ ಅವರಿಗೆ ನನ್ನ ಕ್ಷೇತ್ರದಿಂದ ಲೀಡ್ ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದಿದ್ದಾರೆ.

ಬೀದರ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಹೀಂ ಖಾನ್ ರೊಚ್ಚಿಗೆದ್ದು ಈ ಹೇಳಿಕೆ ನೀಡಿದ್ದು ಸಹಜವಾಗಿ ರಾಜಕಾರಣದ ಬಿಸಿ ಹೆಚ್ಚಿಸಿದೆ. ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಇದ್ದರೆ ಬಿಜೆಪಿಯಿಂದ ಭಗವಂತ ಖೂಬಾ ಸೆಣೆಸಾಟ ನಡೆಸುತ್ತಿದ್ದಾರೆ. ಪಕ್ಕದ ಕಲಬುರಗಿಯಲ್ಲಿ ಆದ ಪಕ್ಷಾಂತರ ಪರ್ವ ಈ ಕ್ಷೇತ್ರದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

Comments are closed.