ರಾಷ್ಟ್ರೀಯ

ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ

Pinterest LinkedIn Tumblr


ಅಹಮದಾಬಾದ್: ಲೋಕಸಭಾ ಚುನಾವಣಾ ಕಾವು ದೇಶದಲ್ಲಿ ಜೋರಾಗಿದೆ. ವಿವಿಧ ಪಕ್ಷಗಳಲ್ಲಿ ಬಿರಿಸಿನ ಪ್ರಚಾರ ನಡೆಯುತ್ತಿದೆ.

ಇತ್ತ ಗುಜರಾತ್ ನಲ್ಲಿ ಕಾಂಗ್ರೆಸ್ ನಾಯಕನಿಗೆ ವೇದಿಕೆಯಲ್ಲಿಯೇ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ.

ಗುಜರಾತಿನ ಸುರೇಂದ್ರ ನಗರದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಪಾಟೀದಾರ್ ಸಮಯದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗೆ ವ್ಯಕ್ತಿಯೋರ್ವ ಬಂದು ಥಳಿಸಿದ್ದಾನೆ.

ಕಾಂಗ್ರೆಸ್ ಜನಾಕ್ರೋಶ ಸಭೆಯಲ್ಲೇ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿ ಏಕಾ ಏಕಿ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದಾರೆ.

ಏಕಾಏಕಿಯಾಗಿ ನಡೆದ ಈ ಘಟನೆಯಿಂದ ಹಾರ್ದಿಕ್ ಪಟೇಲ್ ದಿಗ್ಭ್ರಮೆಯಾಗಿದ್ದು, ಕಾರ್ಯಕರ್ತರು ಆಗಮಿಸಿ, ತಡೆದಿದ್ದಾರೆ.

Comments are closed.