ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ ಒಟ್ಟಾರೆ ಶೇ.61.84 ರಷ್ಟು ಮತದಾನವಾಗಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.72.97 ರಷ್ಟು ಮತದಾನ ನಡೆದಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.45.34 ರಷ್ಟು ಮತದಾನ ನಡೆದಿದೆ.
ಜಿಲ್ಲೆಗಳಲ್ಲಿ ಶೇಕಡಾವಾರು ಮತದಾನದ ವಿವರ
ಹಾಸನ 71.20%
ದಕ್ಷಿಣ ಕನ್ನಡ 72.97%
ಚಿತ್ರದುರ್ಗ 61.75 %
ತುಮಕೂರು 70.23%
ಮಂಡ್ಯ 55.11%
ಮೈಸೂರು 61.32%
ಚಾಮರಾಜನಗರ 66.51%
ಬೆಂಗಳೂರು ಗ್ರಾಮಾಂತರ 58.39%
ಬೆಂಗಳೂರು ಉತ್ತರ 48.19%
ಬೆಂಗಳೂರು ಕೇಂದ್ರ 45.34%
ಬೆಂಗಳೂರು ದಕ್ಷಿಣ 49.36 %
ಚಿಕ್ಕಬಳ್ಳಾಪುರ 69.33%
ಕೋಲಾರ 69.99%
ಉಡುಪಿ, ಚಿಕ್ಕಮಗಳೂರು 69.83%
Comments are closed.