ಕರ್ನಾಟಕ

ಯಡಿಯೂರಪ್ಪರ ಹೆಲಿಕಾಪ್ಟರ್‌ ದಿಢೀರ್ ತಪಾಸಣೆ ನಡೆಸಿದ ಚುನಾವಣೆ ಆಯೋಗದ ಅಧಿಕಾರಿಗಳು

Pinterest LinkedIn Tumblr

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಎರಡೇ ದಿನ ಉಳಿದಿದ್ದು, ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೆಲಿಕಾಪ್ಟರ್‌ ಅನ್ನು ಚುನಾವಣೆ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದರು.

ಶಿವಮೊಗ್ಗ ಜಿಲ್ಲೆಯ ಹೆಲಿಪ್ಯಾಡ್‌ನಲ್ಲಿ ಯಡಿಯೂರಪ್ಪ ಅವರ ಹೆಲಿಕಾಪ್ಟರನ್ನು ಫ್ಲೈಯಿಂಗ್‌ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ನಡೆಸಿದರು.

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 18ರಂದು ಹಾಗೂ ಏಪ್ರಿಲ್ 23ರಂದು ಮತದಾನ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ವಿರುದ್ಧ ತಮ್ಮಲ್ಲಿ ಮಹತ್ವದ ದಾಖಲೆಗಳಿವೆ ಎಂದು ಹಿರಿಯ ನಾಯಕ ಕೆ.ಎಸ್‌ ಈಶ್ವರಪ್ಪ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಹೆಲಿಕಾಪ್ಟರ್‌ ತಪಾಸಣೆ ನಡೆದಿರುವುದು ಕುತೂಹಲ ಕೆರಳಿಸಿದೆ.

ಯಡಿಯೂರಪ್ಪ ಅವರ ‘ಕಪ್ಪ ಕಾಣಿಕೆ’ ಡೈರಿ ಆರೋಪದ ಕುರಿತು ಲೋಕಪಾಲ್‌ ತನಿಖೆ ನಡೆಸುವಂತೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿತ್ತು.

ಯಡಿಯೂರಪ್ಪ ಡೈರಿಯಲ್ಲಿನ ಅಂಶಗಳು ಸುಳ್ಳೇ ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು; ಅದಕ್ಕೆ ವಿಫಲರಾದಲ್ಲಿ ಯಡಿಯೂರಪ್ಪ ಅವರನ್ನು ಜೈಲಿಗಟ್ಟಬೇಕು ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಯಡಿಯೂಪ್ಪ ವಿರುದ್ಧವೂ ತನಿಖೆ ನಡೆಸಲಿ ಎಂದು ಸಿಬಲ್ ಆಗ್ರಹಿಸಿದ್ದಾರೆ.

ಡೈರಿಯಲ್ಲಿ ಉಲ್ಲೇಖಿಸಲಾದ ಸಚಿವರನ್ನು ಐಟಿ ಮತ್ತು ಇ.ಡಿ ಅಧಿಕಾರಿಗಳು ತನಿಖೆ ನಡೆಸಬೇಕು ಮತ್ತು ಲಂಚದ ಹಣ ಕಪ್ಪು ಹಣವೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸಿಬಲ್ ಒತ್ತಾಯಿಸಿದ್ದಾರೆ.

ಬಿಜೆಪಿ ವರಿಷ್ಠ ನಾಯಕರು ಯಡಿಯೂರಪ್ಪ ಅವರಿಂದ 1,800 ಕೋಟಿಗೂ ಹೆಚ್ಚು ಹಣವನ್ನು ಕಪ್ಪ ಕಾಣಿಕೆ ರೂಪದಲ್ಲಿ ಪಡೆದಿದ್ದಾರೆ ಎಂದು ಸಿಬಲ್ ಆರೋಪಿಸಿದರು.

Comments are closed.