ಕರ್ನಾಟಕ

ಸುಮಲತಾ ಅಂಬರೀಶ್’ರ ಫೇಸ್ ಬುಕ್ ಪೇಜ್ ಬ್ಲಾಕ್ ! ಈ ಬಗ್ಗೆ ಸುಮಲತಾ ಹೇಳಿದ್ದೇನು..?

Pinterest LinkedIn Tumblr

ಮಂಡ್ಯ: ಹಾಲಿ ಲೋಕಸಭಾ ಚುನಾವಣೆ ಮತದಾನಕ್ಕೆ ಕೇವಲ ಇನ್ನೆರಡು ದಿನ ಬಾಕಿ ಇರುವಂತೆಯೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ದುಷ್ಕರ್ಮಿಗಳು ಶಾಕ್ ನೀಡಿದ್ದು, ಅವರ ಫೇಸ್ ಬುಕ್ ಪೇಜ್ ಬ್ಲಾಕ್ ಮಾಡಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರಿಗೆ ಇನ್ನೊಂದು ಸವಾಲು ಎದುರಾಗಿದ್ದು, ‘ಸುಮಲತಾ ಅಮರನಾಥ್’ ಹೆಸರಿನಲ್ಲಿದ್ದ ಅವರ ಫೇಸ್‍ಬುಕ್ ಪುಟ ಬ್ಲಾಕ್ ಆಗಿದೆ.

ಈ ಬಗ್ಗೆ ಸ್ವತಃ ಸುಮಲತಾ ಅಂಬರೀಷ್ ಅವರೇ ಬರೆದುಕೊಂಡಿದ್ದು, ‘ಕುತಂತ್ರದ ಭಾಗವಾಗಿ ನಾನು ಇದುವರೆಗೆ ಜನರೊಂದಿಗೆ ಸಂಪರ್ಕದಲ್ಲಿದ್ದ ಫೇಸ್ ಬುಕ್ ಪೇಜನ್ನು ಬ್ಲಾಕ್ ಮಾಡಿಸಿದ್ದಾರೆ .. ಆದರೆ ನಮ್ಮ ತಾಂತ್ರಿಕ ತಂಡ ಈ ಬಗ್ಗೆ ಕಾರ್ಯ ನಿರತವಾಗಿದ್ದು ಶೀಘ್ರ ಪೇಜ್ ಅನ್ನು ರಿಲೋಡ್ ಮಾಡಲಿದ್ದಾರೆ. ಮುಂದಿನ ಬೆಳವಣಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಅತ್ತ ಸುಮಲತಾ ಅವರ ಫೇಸ್ ಬುಕ್ ಖಾತೆ ಬ್ಲಾಕ್ ಆದ ಬೆನ್ನಲ್ಲೇ ತಮ್ಮ ಹೊಸ ಫೇಸ್ ಬುಕ್ ಪೇಜ್ ತೆರೆದಿರುವ ಸುಮಲತಾ ಅವರು ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಸಾಧ್ಯವಾದಷ್ಚೂ ಈ ಪೇಜ್ ಅನ್ನು ಷೇರ್ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಮಲತಾ ಅಂಬರೀಶ್ ಅವರು ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಅವರ ಎಫ್‌ಬಿ ಪೇಜ್ ಬ್ಲಾಕ್ ಆಗಿದ್ದು, ಹೊಸ ಅಧಿಕೃತ ಪುಟ ತೆರೆದಿದ್ದಾರೆ.

Comments are closed.